Advertisement
ಬೆಳಗ್ಗಿನಿಂದಲೇ ಗಾಳಿ ಸಹಿತ ಮಳೆಯಾಗಿದ್ದು, ಮಧ್ಯಾಹ್ನ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿತು. ಮಳೆಯಿಂದಾಗಿ ಕೆಲವೆಡೆಗಳಲ್ಲಿ ರಸ್ತೆ ಯಲ್ಲಿಯೇ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಯಿತು.
ಕುಂದಾಪುರ, ತ್ರಾಸಿಯಿಂದ ಗಂಗೊಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹಲವೆಡೆಗಳಲ್ಲಿ ರಸ್ತೆಯೇ ತೋಡಿನಂತಾ ಗಿತ್ತು. ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯೇ ತೋಡಾಗಿತ್ತು. ಮೇಲ್‌ಗಂಗೊಳ್ಳಿ ಸಮೀಪ, ಮ್ಯಾಂಗನೀಸ್ ಕ್ರಾಸ್ ಬಳಿಯ ರಸ್ತೆಯಲ್ಲಿಯೇ ನೀರು ನಿಂತು, ವಾಹನ ಸವಾರರು ಪರದಾಡುವಂತಾಯಿತು. ಉಡುಪಿ: ಸಾಧಾರಣ ಮಳೆ
ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ತಡರಾತ್ರಿ ಮಳೆಯಾಗಿದ್ದು, ಮಳೆಗೆ ಉಡುಪಿ ತಾ|ನ ಕುತ್ಪಾಡಿ ಗ್ರಾಮದ ರಾಮ ಪಂಜ ಅವರ ವಾಸದ ಮನೆಗೆ ಸ್ವಲ್ಪ ಹಾನಿಯಾಗಿದ್ದು, 10 ಸಾವಿರ ರೂ. ನಷ್ಟ ಸಂಭವಿಸಿದೆ. ಇನ್ನು ಹಲವೆಡೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಬುಧವಾರವೂ ಬೆಳಗ್ಗೆ ಹೊತ್ತು ಜಿಲ್ಲೆಯ ವಿವಿಧೆಡೆಗಳಲ್ಲಿ ಮೋಡದ ವಾತಾವರಣವಿತ್ತು. ಕೆಲವೆಡೆ ಹನಿ ಮಳೆಯಾಗಿದೆ. ಸಂಜೆ ತನಕವೂ ಮೋಡದ ವಾತಾವರಣ ಮುಂದುವರಿದಿತ್ತು. ಬುಧವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಹಿಂದಿನ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುರಿದ ಮಳೆಯ ಸರಾಸರಿ ಪ್ರಮಾಣ 32.9 ಮಿ.ಮೀ. ಆಗಿದೆ.