Advertisement
ನೇತ್ರಾವತಿ ಹಾಗೂ ಮೃತ್ಯುಂಜಯ ನದಿಯಲ್ಲಿ ನೀರಿನ ಮಟ್ಟ ಏರಿದಲ್ಲಿ ಸಮೀಪದ ನಿವಾಸಿಗಳಿಗೆ ಆತಂಕ ತಪ್ಪಿದ್ದಲ್ಲ. ಜೂ. 1ರಂದು ಈ ಭಾಗದಲ್ಲಿ ಭಾರೀ ಮಳೆಯಾಗಿದ್ದರಿಂದ ಕುಕ್ಕಾವು ಏಳುವರೆ ಹಳ್ಳ ತುಂಬಿತ್ತು. ಪರಿಣಾಮ ಸಮೀಪದ ಕೊಪ್ಪದ ಗಂಡಿ ಕಿಂಡಿ ಅಣೆಕಟ್ಟುಗಳಲ್ಲಿ ಕಸದ ರಾಶಿ ಬಂದು ಸೇರಿತ್ತು. ಮುಂಡಾಜೆ ಕಾಪುವಿನ ಬಳಿ ಮೃತ್ಯುಂಜಯ ನದಿಗೆ ಅಡ್ಡಲಾಗಿರುವ ಅಣೆಕಟ್ಟಿನ ಕಿಂಡಿಗಳಲ್ಲಿ ಮರಮಟ್ಟು ಹಾಗೂ ಕಸಕಡ್ಡಿ ಸಿಲುಕಿ ಕೊಂಡಿತ್ತು.
ಶನಿವಾರ ಸುರಿದ ಭಾರೀ ಮಳೆಗೆ ಕಿಲ್ಲೂರು ನದಿಯ ಒಡ್ಡುಕಲ್ಲು ಕಿಂಡಿ ಅಣೆಕಟ್ಟಿನಲ್ಲಿ ಮರದ ಗೆಲ್ಲು, ಕಸದ ರಾಶಿ ಸಿಲುಕಿಕೊಂಡಿದೆ. ಕಳೆದ ನೆರೆಗೆ ನದಿಯಲ್ಲಿ ಹೂಳು ಮರ ತೆರವುಗೊಳಿಸದ ಪರಿಣಾಮ ಈ ಬಾರಿ ಮಳೆಗೆ ಕೃತಕ ನೆರೆ ಸಂಭವಿಸುವ ಸಾಧ್ಯತೆ ಇದೆ. ಇಷ್ಟಾದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ.