Advertisement

ಕೊಪ್ಪ ತಾಲೂಕಿನಾದ್ಯಂತ ಉತ್ತಮ ಮಳೆ

08:04 AM Jun 13, 2020 | Suhan S |

ಕೊಪ್ಪ: ತಾಲೂಕಿನಾದ್ಯಂದ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ವಾಯುಭಾರ ಕುಸಿತದಿಂದ ಒಂದಷ್ಟು ಮಳೆ ಆಗಿತ್ತು. ಎರಡು ದಿನದಿಂದ ತಾಲೂಕಿನಾದ್ಯಂತ ಮಳೆಗಾಲದ ವಾತಾವರಣ ಮೂಡಿದ್ದು, ಮುಂಗಾರು ಮಳೆ ಪ್ರಾರಂಭದವಾದಂತಾಗಿದೆ.

Advertisement

ತಾಲೂಕಿನಲ್ಲಿ ಮೋಡ ಕವಿದ ವಾತವರಣವಿದ್ದು, ಸ್ವಲ್ಪ ಬಿಡುವು ನೀಡಿ ಬುಧವಾರ ಮಧ್ಯಾಹ್ನದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಚಳಿ-ಗಾಳಿ ಬೀಸುತ್ತಿದೆ. ಬುಧವಾರ ಕೊಪ್ಪ ಪಟ್ಟಣದಲ್ಲಿ 38 ಮಿ.ಮೀ., ಹರಿಹರಪುರ 31.2 ಮಿ.ಮೀ., ಜಯಪುರ 25.3 ಮಿ.ಮೀ., ಬಸರಿಕಟ್ಟೆ 24.1 ಮಿ.ಮೀ., ಕಮ್ಮರಡಿಯಲ್ಲಿ 35.5 ಮಿ.ಮೀ. ಮಳೆಯಾಗಿದೆ.

ಗಾಳಿ-ಮಳೆಗೆ ಉರುಳಿದ ಮರ: ತಾಲೂಕಿನಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿದೆ. ತುಂಗಾ ನದಿ ಸೇರಿದಂತೆ ವಿವಿಧ ಉಪ ನದಿ, ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಟ್ಟಣದ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಬಳಿ ಮಧ್ಯಾಹ್ನ ಸುರಿದ ಗಾಳಿ- ಮಳೆಗೆ ಮರವೊಂದು ಉರುಳಿ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next