Advertisement

ಮಳೆ: ತುಂಬಿ ಹರಿದ ಕೃಷಿ ಹೊಂಡಗಳು

12:02 PM Sep 11, 2020 | Suhan S |

ದೇವನಹಳ್ಳಿ: ತಾಲೂಕಿನಲ್ಲಿ ಮಂಗಳವಾರ ಮತ್ತು ಬುಧವಾರ ಸುರಿದ ಉತ್ತಮ ಮಳೆಯಿಂದಾಗಿ ಕೆರೆ, ಕುಂಟೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

Advertisement

ತಾಲೂಕಿನ ಕೊಯಿರಾ ಗ್ರಾಮದ ಕೆರೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಹೂಳೆತ್ತಲಾಗಿತ್ತು. ಇನ್ನೊಂದು ಮಳೆಯಾದರೆ ಕೆರೆ ಕೋಡಿ ಹರಿಯುತ್ತಿತ್ತು. ಮಳೆಯಿಂದಾಗಿ ಈ ಭಾಗದ ಜ್ಯೋತಿಪುರ ಕಲ್ಯಾಣಿ, ಇತರೆ ಕುಂಟೆಗಳು ಜಲಾವೃತವಾಗಿವೆ. ತಾಲೂಕಿನ ಅಣ್ಣೇಶ್ವರ ಗ್ರಾಮದ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿರುವುದರಿಂದ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿದೆ. ಸ್ಥಳೀಯ ಗ್ರಾಪಂ ಕಸ ಹಾಕುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಮುನಿರಾಜು ಆಗ್ರಹಿಸಿದ್ದಾರೆ.

ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ನೇತೃತ್ವದಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಹೂಳೆತ್ತಲಾಗಿತ್ತು. ಪರಿಣಾಮ ಕೆರೆಗಳಲ್ಲಿ ನೀರು ತುಂಬಿಕೊಂಡು ಅಂತರ್ಜಲಮಟ್ಟ ಹೆಚ್ಚಾಗಲು ಸಹಕಾರಿಯಾಗಿದೆ. ತಾಲೂಕಿನಲ್ಲಿ 92ಮಿ.ಮೀ ಮಳೆಯಾಗಿದ್ದು, ಕುಂದಾಣ ಹೋಬಳಿಯಲ್ಲಿ 14ಮಿ.ಮೀ, ವಿಜಯಪುರ ಹೋಬಳಿ 17ಮಿ.ಮೀ, ಚನ್ನರಾಯಪಟ್ಟಣ ಹೋಬಳಿ 33ಮಿ. ಮೀ, ದೇವನಹಳ್ಳಿ ಕಸಬಾ ಹೋಬಳಿ 28ಮಿ.ಮೀಮಳೆಯಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next