Advertisement

ಉತ್ತಮ ಮಳೆ: ಚೆಕ್‌ಡ್ಯಾಂ ಭರ್ತಿ

11:59 AM Jul 25, 2020 | Suhan S |

ನಾಯಕನಹಟ್ಟಿ: ಸತತ ನಾಲ್ಕನೇ ದಿನ ಸುರಿದ ಉತ್ತಮ ಮಳೆಯಿಂದಾಗಿ ಶುಕ್ರವಾರ ಕೆರೆ ಹಾಗೂ ಚೆಕ್‌ಡ್ಯಾಂ ಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.

Advertisement

ಜಾಗನೂರಹಟ್ಟಿ, ಎನ್‌. ಗೌರೀಪುರ, ಚನ್ನಬಸಯ್ಯನಹಟ್ಟಿಯಲ್ಲಿ ಉತ್ತಮವಾಗಿ ಮಳೆಯಾಗಿದೆ. ಪಟ್ಟಣ ಸಮೀಪದ ಚಿಕ್ಕ ಕೆರೆಗೆ ಬಸವನಹಳ್ಳದ ಮೂಲಕ ನೀರು ಹರಿದಿದೆ. ಜಾಗನೂರಹಟ್ಟಿ, ಜೋಗಿಹಟ್ಟಿ, ಎನ್‌. ಗೌರೀಪುರ ಗ್ರಾಮದ ಚೆಕ್‌ ಡ್ಯಾಂಗಳು ತುಂಬಿವೆ. ಎನ್‌. ಗೌರೀಪುರ ಗ್ರಾಮದಲ್ಲಿ ಕಳೆದ ವರ್ಷ ನಿರ್ಮಿಸಿದ್ದ 50 ಲಕ್ಷ ರೂ. ವೆಚ್ಚದ ಚೆಕ್‌ಡ್ಯಾಂ ತುಂಬಿದೆ.

ಹೊಸಗುಡ್ಡದಲ್ಲಿ ಆರಂಭವಾಗುವ ದೊಡ್ಡ ಹಳ್ಳದ ನೀರು ಸುಮಾರು 15ಕಿಮೀ ದೂರ ಹರಿದಿದೆ. ಹೀಗಾಗಿ ನಾಯಕನಹಟ್ಟಿ, ಎನ್‌. ಮಹಾದೇವಪುರ, ಗಿಡ್ಡಾಪುರ, ಎನ್‌. ಗೌರೀಪುರ ಹಾಗೂ ದೇವರಹಳ್ಳಿ ಗ್ರಾಮಗಳ ಮೂಲಕ ಪೂರ್ಣ ಪ್ರಮಾಣ ದಲ್ಲಿ ಹಳ್ಳ ಹರಿದಿದೆ. ರಾಜ್ಯ ಹೆದ್ದಾರಿ 45 ರಲ್ಲಿ ಹರಿಯುತ್ತಿರುವ ಚಿಕ್ಕ ಹಳ್ಳದಲ್ಲಿ ನೀರು ತುಂಬಿ ಹರಿದಿದೆ.

ಹಳ್ಳದ ಹರಿವಿನಿಂದಾಗಿ ತಗ್ಗು ಗುಂಡಿಗಳು ಉಂಟಾಗಿವೆ. ಹೀಗಾಗಿ ಹಲವಾರು ಬೈಕ್‌ ಸವಾರರು ಹಳ್ಳದಲ್ಲಿ ಬಿದ್ದು ಎದ್ದು ಹೋಗುವಂತಾಯಿತು. ರಾಜ್ಯ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಡಬ್ಲ್ಯೂಡಿ ಸೆಕ್ಷನ್‌ ಇಂಜಿನಿಯರ್‌ ಹಕೀಮ್‌, ಚಿಕ್ಕ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ 1.2 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಈಗಾಗಲೇ ಚಳ್ಳಕೆರೆ-ನಾಯಕನಹಟ್ಟಿ ರಾಜ್ಯ ಹೆದ್ದಾರಿ ಡಾಂಬರೀಕರಣ ಪೂರ್ಣಗೊಂಡಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next