Advertisement
ಮಂಗಳೂರು ನಗರದಲ್ಲಿ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ಅನೇಕ ಕಡೆ ಮಳೆಯಾದ ವರದಿಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕೆಲವೆಡೆ ಬೆಳಗ್ಗಿನ ವೇಳೆ ಮಂಜಿನಿಂದ ಕೂಡಿತ್ತು.
Related Articles
ವಿವಿಧೆಡೆ ಮನೆಗಳಿಗೆ ಹಾನಿ
ಪುತ್ತೂರು: ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ. ಒಳಮೊಗ್ರು ಗ್ರಾಮದ ಉಜಿರೋಡಿ ಮತ್ತು ಉರ್ವ ಪರಿಸರದಲ್ಲಿ ಸಂಜೆ ಬೀಸಿದ ಭಾರೀ ಗಾಳಿ, ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ.
Advertisement
ಉರ್ವ ಮತ್ತು ಉಜಿರೋಡಿ ಪರಿಸರದ ಶೇಖರ, ಹಮೀದ್, ರಾಧಾ, ನಾಗಮ್ಮ, ಜಗದೀಶ್, ಪ್ರಕಾಶ್ ಗೌಡ, ಭಾಸ್ಕರ ಮತ್ತು ಸೀತಾ ಅವರ ವಾಸದ ಮನೆ, ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ಉಜಿರೋಡಿಯಲ್ಲಿ ವಾಸದಮನೆಗೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು 1 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ. ಪ್ರಕಾಶ್ ಗೌಡ ಅವರ ಮನೆಗೆ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಮನೆಯ ಮಾಡು ಸಂಪೂರ್ಣ ಜಖಂಗೊಂಡಿದೆ. ರೆಂಜಿಲಾಡಿ: ಮನೆ ಕುಸಿತ
ಸುಬ್ರಹ್ಮಣ್ಯ: ನಿರಂತರ ಮಳೆಯಿಂದಾಗಿ ಮನೆಯ ಹೆಂಚಿನ ಮೇಲ್ಛಾವಣಿ ಕುಸಿದು ಅಪಾರ ಹಾನಿ ಸಂಭವಿಸಿರುವ ಘಟನೆ ಮಂಗಳವಾರ ರಾತ್ರಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನೂಜಿ ಕೆಂಚರಾಣ್ಯ ಅವರ ಪತ್ನಿ ಕುಂಞಮ್ಮ ಅವರ ಮನೆ ಹಾನಿಗೀಡಾಗಿದೆ. ಮಾಡು ಕುಸಿದಿದ್ದು ಪೀಠೊಪಕರಣ ನಾಶಗೊಂಡಿವೆ. ಘಟನೆ ವೇಳೆ ಮನೆ ಮಂದಿ ಹೊರಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.