Advertisement

ಹೈನುಗಾರಿಕೆಯಿಂದ ಉತ್ತಮ ಲಾಭ: ಮುನಿರಾಜು

01:07 PM Oct 28, 2020 | Suhan S |

ದೇವನಹಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರು ಹಾಲು ಒಕ್ಕೂಟಕ್ಕೆ ಬರೋಬ್ಬರಿ 80 ಕೋಟಿ ರೂ. ನಷ್ಟವಾಗಿರುತ್ತದೆ. ಕೋವಿಡ್‌-19ರ ಸೋಂಕು ಎಲ್ಲಾ ಕ್ಷೇತ್ರಗಳಲ್ಲಿಯೂ ನಷ್ಟವನ್ನುಂಟು ಮಾಡಿದೆ ಎಂದು ಬೆಂಗಳೂರು ಹಾಲು ಒಕ್ಕೂಟದನಿರ್ದೇಶಕ ಬಿ.ಶ್ರೀನಿವಾಸ್‌ ತಿಳಿಸಿದರು.

Advertisement

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಕಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಸುಗಳಿಗೆ ಸಮತೋಲನ ಆಹಾರ ನೀಡಿದರೆ ಹಾಲಿನಲ್ಲಿ ಫ್ಯಾಟ್‌ ಅಂಶ ಹೆಚ್ಚಾಗುತ್ತದೆ ಎಂದರು.

ಸಹಕಾರ: ದಿನನಿತ್ಯ ಬೆಂಗಳೂರು ಹಾಲು ಒಕ್ಕೂಟಕ್ಕೆ 18 ಲಕ್ಷ ಲೀ.ಹಾಲು ಸಂಗ್ರಹಣೆಯಾಗುತ್ತಿದ್ದು, ಅದರಲ್ಲಿ 6-7ಲಕ್ಷ ಲೀ.ಹಾಲು ಮಾತ್ರ ಮಾರಾಟವಾಗುತ್ತಿದೆ.ನಗರ ಹಾಗೂ ಗ್ರಾಮೀಣ ಭಾಗದ ಹೋಟೆಲ್‌ಗ‌ಳಲ್ಲಿ ಶೇ.75ರಷ್ಟು ಹಾಲು ಖರೀದಿ ಕಡಿಮೆಯಾಗಿದೆ. ಆದರೂ ಸಹ ಹಾಲನ್ನು ಪುಡಿ, ಚೀಸ್‌, ಇತರೆ ಉತ್ಪನ್ನಗಳ ಬಳಕೆ ಮಾಡುತ್ತಿದ್ದರೂ ನಷ್ಟವಾಗುತ್ತಿದೆ. ಸಂಘದ ಅಭಿವೃದ್ಧಿಗೆ ಬಮೂಲ್‌ನಿಂದ ಸಿಗುವ ಎಲ್ಲಾ ರೀತಿಯ ಸಹಕಾರ  ನೀಡಲಾಗುವುದು ಎಂದು ತಿಳಿಸಿದರು.

ಬಮೂಲ್‌ನಿಂದ ಅನುಕೂಲ: ರೈತರು ರಾಸುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಮತ್ತು ವೈದ್ಯರ ಸಲಹೆಯಂತೆ ನೋಡಿಕೊಳ್ಳಬೇಕು. ಇತರೆ ವೈದ್ಯರು ನೀಡುವ ಸಲಹೆಗಳನ್ನು ಕಡೆಗಣಿಸಬೇಕು. ಉತ್ತಮ ರಾಸುಗಳಿಗೆಆಹಾರ ಪದ್ಧತಿಯಲ್ಲಿ ಸಮತೋಲನ ಕಾಪಾಡಿಕೊಂಡರೆ, ಲಾಭ ಕಾಣಲು ಸಾಧ್ಯವಾಗುತ್ತದೆ. ಕೋವಿಡ್‌ ಇರುವುದರಿಂದಹಾಲಿನ ಉತ್ಪನ್ನಗಳ ಬೇಡಿಕೆ ಕಡಿಮೆಯಿದ್ದು, ರೈತರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬಮೂಲ್‌ನಿಂದ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

326 ಸದಸ್ಯರು: ಕಾರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್‌ .ಭೈರೇಗೌಡ ಮಾತನಾಡಿ, ಸಂಘವು 1975ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ 326 ಸದಸ್ಯರನ್ನು ಹೊಂದಿದೆ. ಇದರಲ್ಲಿ 132 ಸಕ್ರಿಯ ಮತ್ತು 194 ಸಕ್ರಿಯರಲ್ಲದ ಸದಸ್ಯರು ಇದ್ದಾರೆ. 106 ಸದಸ್ಯರು ಹಾಲು ಪೂರೈಸುತ್ತಿದ್ದಾರೆ.

Advertisement

ಒಕ್ಕೂಟದ ನಿರ್ದೇಶಕರ ಅನುದಾನದಲ್ಲಿ ಒಂದು ಮಾದರಿ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಗುತ್ತಿದೆ. ಒಕ್ಕೂಟದ ಸಹಕಾರದಿಂದ ರಾಸುಗಳ ಆರೋಗ್ಯ ತಪಾಸಣೆ, ಲಸಿಕೆ, ವಿಮಾ ಯೋಜನೆ, ಸಂಘದ ಸದಸ್ಯರಿಗೆ ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರಾಸುಗಳ ಆರೋಗ್ಯಕ್ಕೆ ತುರ್ತು ವೈದ್ಯಕೀಯ ಸೇವೆಯನ್ನು ಸಹ ನೀಡಲಾಗುತ್ತಿದೆ. ಸಂಘದ ಸದಸ್ಯರು ಸಂಘವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಹಾಲು ಪೂರೈಕೆಗೆ ಒತ್ತು ನೀಡಬೇಕು ಎಂದು ಹೇಳಿದರು.

ನಿರ್ದೇಶಕರಾದ ಕೆ.ಲಕ್ಷ್ಮೀಗೌಡ, ಎಂ.ಮುನಿಕೃಷ್ಣಪ್ಪ, ಬಿ.ಎನ್‌.ಮುನೇಗೌಡ, ಕೆ.ಎಸ್‌.ಮುನೇಗೌಡ, ಕೆ.ಸುನೀಲ್‌, ಎಂ. ವೆಂಕಟೇಶ್‌, ಕಾಂತಮ್ಮ, ನಾಗರತ್ನ, ನಾರಾಯಣಮ್ಮ, ನಾರಾಯಣಸ್ವಾಮಿ, ದೇವನಹಳ್ಳಿ ಶಿಬಿರದ ಬಮೂಲ್‌ ವಿಸ್ತರಣಾಧಿಕಾರಿ ಹೆಚ್‌. ಎಂ.ಅನಿಲ್‌ಕುಮಾರ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಮುನಿರಾಜು, ಹಾಲು ಪರೀಕ್ಷಕ ಶಶಿಕುಮಾರ ವಿ., ಸಹಾಯಕಮಂಜುನಾಥ್‌, ಗ್ರಾಪಂ ಮಾಜಿ ಅಧ್ಯಕ್ಷ ಎ.ದೇವರಾಜ್‌, ರಾಜೇಂದ್ರ, ತಾಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಮುಖಂಡ ಮುನಿಕೃಷ್ಣ, ಸದಸ್ಯರು ಇದ್ದರು.

ಸಂಘವು ಒಕ್ಕೂಟ ಮತ್ತು ಗ್ರಾಮದ ವಿಎಸ್‌ಎಸ್‌ಎನ್‌, ಕೆಜಿಬಿ ಕಾರ್ಪೊರೇಷನ್‌ ಬ್ಯಾಂಕ್‌ ಗಳಲ್ಲಿ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿ ಹೊಂದಿದ್ದು,  ಸಂಘದ ಸದಸ್ಯರ, ಆಡಳಿತ ಮಂಡಳಿಯ, ಒಕ್ಕೂಟ ನಿರ್ದೇಶಕರು, ಅಧಿಕಾರಿ ಗಳ ಸಹಕಾರ ಮತ್ತು ಮಾರ್ಗ ದರ್ಶನದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಸ್‌.ಭೈರೇಗೌಡ, ಅಧ್ಯಕ್ಷ ಕಾರಹಳ್ಳಿ ಡೇರಿ

Advertisement

Udayavani is now on Telegram. Click here to join our channel and stay updated with the latest news.

Next