Advertisement

KPSC ಮತ್ತುUPSC ಅಭ್ಯರ್ಥಿಗಳಿಗೆ ಸಿಹಿಸುದ್ದಿ: ಮುಖ್ಯ ಪರೀಕ್ಷೆ ಮುಂಡೂಡಿದ ರಾಜ್ಯ ಸರ್ಕಾರ

04:39 PM Nov 19, 2020 | Suhan S |

ಬೆಂಗಳೂರು: ಕೆ.ಪಿ.ಎಸ್.ಸಿ ಹಾಗೂ ಯು.ಪಿ.ಎಸ್.ಸಿ ಎರಡೂ ಪರೀಕ್ಷೆಗಳು ಒಂದೇ ಸಮಯದಲ್ಲಿ ನಿಗದಿಪಡಿಸಿದ ಹಿನ್ನೆಲೆ ಪರೀಕ್ಷಾ ಅಭ್ಯರ್ಥಿಗಳಲ್ಲಿ  ಗೊಂದಲ ಮನೆಮಾಡಿತ್ತು. ಪರೀಕ್ಷೆಯ ತಯಾರಿ ಕುರಿತಾಗಿಯೂ ಸಮಸ್ಯೆ ತಲೆದೋರಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು ಪರೀಕ್ಷೆ ಮುಂದೂಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಈ ಹಿಂದೆ 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 2 ರಿಂದ 5 ರ ವರೆಗೆ ನಿಗದಿ ಪಡಿಸಲಾಗಿದ್ದ ಕೆ.ಪಿ.ಎಸ್.ಸಿ ಪರೀಕ್ಷೆಯನ್ನು  ಫೆಬ್ರವರಿ 13 ರ ರಿಂದ16 ರ ವರೆಗೆ ನಡೆಸುವಂತೆ ಆದೇಶ ಹೊರಡಿಸಿದೆ. ಹಾಗೆಯೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು 2021ರ ಜನವರಿ 8 ರಿಂದ 10ರ ವರೆಗೆ ಹಾಗೂ 16  ಮತ್ತು 17 ರಂದು ನಡೆಯಲಿವೆ.

ಇದನ್ನೂ ಓದಿ:

ಯು.ಪಿ.ಎಸ್.ಸಿ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಜೊತೆ ಜೊತೆಗೆ ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿರುತ್ತಾರೆ. ಇಲ್ಲಿ ಎರಡೂ ಪರೀಕ್ಷೆಗಳ ತಯಾರಿ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿಪಡಿಸಬೇಕಾಗಿ ಆಭ್ಯರ್ಥಿಗಳು ಒತ್ತಾಯಿಸಿದ್ದರು. ಇದೀಗ ಅಭ್ಯರ್ಥಿಗಳ ಒತ್ತಾಯಕ್ಕೆ ಮಣಿದ ಸರ್ಕಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next