Advertisement

ಅಭ್ಯಾಸಕ್ಕೆ ಮರಳಿದ ಮಿಚೆಲ್‌ ಮಾರ್ಷ್‌, ಟಿಮ್‌ ಸೀಫ‌ರ್ಟ್‌

11:12 PM Apr 27, 2022 | Team Udayavani |

ಮುಂಬಯಿ: ಕೋವಿಡ್‌ನಿಂದ ಚೇತರಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಮತ್ತು ಟಿಮ್‌ ಸೀಫ‌ರ್ಟ್‌ ಅವರು ಅಭ್ಯಾಸಕ್ಕೆ ಮರಳಿದ್ದಾರೆ.

Advertisement

ಕಳೆದ ವಾರ ಕೋವಿಡ್‌ ಪಾಸಿಟಿವ್‌ ಬಂದಿದ್ದ ಇವರಿಬ್ಬರು ಕಡ್ಡಾಯ ಕ್ವಾರಂಟೈನ್‌ ಅವಧಿ ಮುಗಿಸಿದ ಬಳಿಕ ಇದೀಗ ಅಭ್ಯಾಸಕ್ಕಾಗಿ ತಂಡವನ್ನು ಸೇರಿಕೊಂಡಿದ್ದಾರೆ.

ಕೋಲ್ಕತಾ ವಿರುದ್ಧದ ಪಂದ್ಯಕ್ಕಾಗಿ ಅವರಿಬ್ಬರು ತಂಡದ ಸದಸ್ಯರ ಜತೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಆಟಗಾರರು ಅಭ್ಯಾಸ ನಡೆಸು ತ್ತಿರುವ ಚಿತ್ರಗಳನ್ನು ಡೆಲ್ಲಿ ತಂಡ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ. ನಮಗೆ ಅತೀವ ಸಂತೋಷವಾಗುತ್ತಿದೆ ಮತ್ತು ಕ್ರಿಕೆಟಿಗರಿ ಬ್ಬರು ಅಭ್ಯಾಸಕ್ಕೆ ಮರಳಿರುವುದು ಗ್ರೇಟ್‌ ಎಂದು ಡೆಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next