ಬೆಂಗಳೂರು: “ಚಳವಳಿ ಎಂದರೆ ಚಲನ ಶೀಲತೆ. ಆದ್ದರಿಂದ ಉತ್ತಮ ಸಾಹಿತ್ಯ ಕೃತಿಗಳು ಹೊರಬರಬೇಕಾದರೆ ಲೇಖಕನದಲ್ಲಿ ಚಳವಳಿಯ ಮನಃಸ್ಥಿತಿ ಯಾವಾ ಗಲೂ ಜಾಗೃತವಾಗಿರಬೇಕು,” ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ನಗರದ ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಛಂದ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐದು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಚಳವಳಿಯಿಂದ ಚಲನಶೀಲತೆ ಸಾಧ್ಯ. ಈ ಚಲನಶೀಲತೆಯಿಂದ ಸೃಜನಶೀಲತೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಚಳವಳಿ ಮನಃಸ್ಥಿತಿ ಹೊಂದಿದ ಲೇಖಕರಿಂದ ಉತ್ತಮ ಸಾಹಿತ್ಯ ಕೃತಿಗಳು ಮೂಡಿಬರಲು ಸಾಧ್ಯವಾಗುತ್ತದೆ,” ಎಂದರು.
“ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನ ಕಾಲದಿಂದಲೂ ಚಳವಳಿ ಮನಃಸ್ಥಿತಿ ಕಾಣಬಹುದು. ಮಹಾಭಾರತ ಕಾವ್ಯದಲ್ಲಿ ರಾಜ ಅರಿಕೇಸರಿಯನ್ನು ನಾಯಕನನ್ನಾಗಿಸಿರುವ ಪಂಪ ಕೊನೆ ಯಲ್ಲಿ “ನೆನೆವಡೆ ಕರ್ಣನಂ ನೆನೆಯ’ ಎಂದು ಪ್ರತಿನಾಯಕನನ್ನು ಸೃಷ್ಟಿಸಿದ್ದಾನೆ. ಅದೇ ಚಳವಳಿಯ ಮನಃಸ್ಥಿ” ಎಂದು ಹೇಳಿದರು.
“ಆದರೆ, ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಅಥವಾ ಸಾಹಿತಿಗಳಿಗೆ ಚಳವಳಿ ಯೊಂದಿಗೆ ಸಂಬಂಧ ಹೊಂದಿರಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿ
ಸಿದೆ. ಆದರೆ, ಚಳವಳಿ ಮನಃಸ್ಥಿತಿಯೇ ಇಲ್ಲದಿದ್ದರೆ ಲೇಖಕ ಜಡವಾಗುತ್ತಾನೆ,” ಎಂದು ಸೂಚ್ಯವಾಗಿ ಹೇಳಿದರು.
“ಸಾಹಿತಿಗಳು ಚಳವಳಿಯಲ್ಲಿ ಭಾಗವಹಿ ಸಬೇಕು ಅಥವಾ ಭಾಗವಹಿಸಬಾರದು ಎಂದು ತಾಕೀತು ಮಾಡುವುದು ಸರಿಯಲ್ಲ. ಚಳವಳಿಯಲ್ಲಿ ಭಾಗವಹಿಸುವುದು ಅಥವಾ ಭಾಗವಹಿಸದೆ ಇರುವುದು ಲೇಖಕನ ಆಸಕ್ತಿ, ಕುತೂಹಲ ಮತ್ತು ಅವರವರ ಸ್ವಾತಂತ್ರಕ್ಕೆ ಬಿಟ್ಟ ವಿಚಾರ,” ಎಂದು ಹೇಳಿದರು.ನಂತರ ಪತ್ರಕರ್ತ ರಘುನಾಥ ಚ.ಹ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿ ಅವರು ಲೇಖಕರೊಂದಿಗೆ ಸಂವಾದ ನಡೆಸಿದರು.