Advertisement

ಈ ವರ್ಷವೂ ಉತ್ತಮ ಮುಂಗಾರು! ಕರ್ನಾಟಕಕ್ಕೆ ಅಲ್ಪ ಮಳೆ ಕೊರತೆ ನಿರೀಕ್ಷೆ

08:24 PM Apr 14, 2021 | Team Udayavani |

ನವದೆಹಲಿ: ಸತತ ಮೂರನೇ ವರ್ಷ ಮುಂಗಾರು ವಿಚಾರದಲ್ಲಿ ದೇಶದ ರೈತಾಪಿ ವರ್ಗಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಈ ವರ್ಷವೂ ದೇಶದಲ್ಲಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಮುನ್ಸೂಚನೆ ನೀಡಿದೆ. ವಿಶೇಷವೆಂದರೆ, ಸತತ ಮೂರನೇ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಕಾಣಲಿದೆ. ಅಂದರೆ, 2019, 2020ರಂತೆ 2021ರಲ್ಲೂ ಉತ್ತಮವಾಗಿ ಮುಂಗಾರು ಮಳೆಯಾಗಲಿದೆ ಎಂದು ಈ ಸಂಸ್ಥೆ ಭವಿಷ್ಯ ನುಡಿದಿದೆ.

Advertisement

ಮುಂಗಾರು ವಿಚಾರದಲ್ಲಿ ಹ್ಯಾಟ್ರಿಕ್‌ ಖುಷಿ ಸಿಗುತ್ತಿರುವುದು ಇದೇ ಮೊದಲಲ್ಲ. 1996, 1997 ಮತ್ತು 1998ರಲ್ಲಿಯೂ ಉತ್ತಮವಾಗಿ ಮುಂಗಾರು ಸುರಿದಿತ್ತು.

ಸ್ಕೈಮೆಟ್‌ ಹವಾಮಾನ ಸಂಸ್ಥೆ ಪ್ರಕಟಿಸಿದ ಮಾಹಿತಿ ಪ್ರಕಾರ ಸಾಮಾನ್ಯ ಮಳೆ ಪ್ರಮಾಣ ಸರಿ ಸುಮಾರು ಶೇ.103ರ ವರೆಗೆ ಆಗಲಿದೆ. ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ 880.6 ಮಿಲಿಮೀಟರ್‌ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಮಳೆಯ ಕೊರತೆ ಉಂಟಾಗುವ ಅಪಾಯವನ್ನೂ ಮುನ್ಸೂಚನೆಯಲ್ಲಿ ನೀಡಲಾಗಿದೆ.

ಇದನ್ನೂ ಓದಿ :ಅವಳಿ ಕೊಲೆ ಪ್ರಕರಣ : ಬಂಧಿಸಲು ಹೋದ ಪೋಲೀಸರ ಮೇಲೆ ದಾಳಿ, ಆರೋಪಿ ಕಾಲಿಗೆ ಗುಂಡೇಟು

ಕರ್ನಾಟಕದಲ್ಲಿ ಅಲ್ಪ ಕೊರತೆ: ಜುಲೈನಿಂದ ಆಗಸ್ಟ್‌ ಅವಧಿಯಲ್ಲಿ ಕರ್ನಾಟಕದಲ್ಲಿ ಅಲ್ಪ ಕೊರತೆ ಉಂಟಾಗಲಿದೆ ಎಂದು ಉಲ್ಲೇಖೀಸಲಾಗಿದೆ. ಕರ್ನಾಟಕದ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಒಂದಷ್ಟು ಕೊರತೆ ಕಾಣಿಸಿಕೊಳ್ಳಬಹುದು. ಒಟ್ಟಾರೆಯಾಗಿ ಹೇಳುವುದಿದ್ದರೆ ಜೂನ್‌ನಿಂದ ಸೆಪ್ಟೆಂಬರ್‌ ಮುಕ್ತಾಯದ ವರೆಗೆ ದೇಶ ಉತ್ತಮ ಮುಂಗಾರು ಮಳೆಯನ್ನು ಹೊಂದಲಿದೆ. ಜುಲೈನಲ್ಲಿ ಶೇ.97, ಆಗಸ್ಟ್‌ನಲ್ಲಿ ಶೇ.99ರಷ್ಟು ಮಳೆಯಾಗುವ ನಿರೀಕ್ಷೆ ಇದೆ.

Advertisement

ಅಸ್ತವ್ಯಸ್ತ: ಹವಾಮಾನ ಬದಲಾವಣೆಯಿಂದಾಗಿ ದೇಶದಲ್ಲಿ ಮುಂಗಾರು ಬಲವರ್ಧನೆಯಾಗಿದೆ. ಆದರೆ, ಅಸ್ತವ್ಯಸ್ತವಾಗಿ ಇರುತ್ತಿದೆ ಎಂದು “ಅರ್ತ್‌ ಸಿಸ್ಟಮ್‌ ಡೈನಾಮಿಕ್ಸ್‌’ ಎಂಬ ನಿಯತಕಾಲಿಕದಲ್ಲಿ ಬರೆಯಲಾಗಿರುವ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಜಗತ್ತಿನ 30 ರಾಷ್ಟ್ರಗಳ ಹವಾಮಾನ ವ್ಯವಸ್ಥೆ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಲೇಖಕ ಜರ್ಮನಿಯ ಅಂಜ ಕೇಟ್ಸ್‌ಬರ್ಜರ್‌ ಪ್ರತಿಪಾದಿಸಿದ್ದಾರೆ. 1950ರಿಂದ ಮೊದಲ್ಗೊಂಡು ಮಾನವ ಪ್ರಕೃತಿಯ ವ್ಯವಸ್ಥೆ ಮೇಲೆ ಹತೋಟಿ ಸಾಧಿಸುವ ಪ್ರಯತ್ನ ಶುರು ಮಾಡಿದ್ದಾನೆ. ಇದರಿಂದಾಗಿ ಅದು ಹಲವು ರೀತಿಯಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಿದೆ ಎಂದು ಲೇಖನದಲ್ಲಿ ಉಲ್ಲೇಖೀಸಲಾಗಿದೆ.

ಹಿಂದಿನ ಮಳೆ ಪ್ರಮಾಣ
2018 – ಶೇ.103
2019 – ಶೇ.110
2020 – ಶೇ.109
2021 – ಶೇ.103

Advertisement

Udayavani is now on Telegram. Click here to join our channel and stay updated with the latest news.

Next