Advertisement

ಉತ್ತಮ ಮುಂಗಾರು: ಗರಿಗೆದರಿದ ಮುಂಬಯಿ ಶೇರು 244 ಅಂಕ ಏರಿಕೆ

04:36 PM Jul 19, 2017 | udayavani editorial |

ಮುಂಬಯಿ : ದೇಶದಲ್ಲಿ ಮುಂಗಾರು ಮಳೆ ಆಶಾದಾಯಕ ಪ್ರಗತಿಯನ್ನು ಕಾಣುತ್ತಿದ್ದು ಇದರಿಂದ ಗರಿಗೆದರಿದ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 244.36 ಅಂಕಗಳ ಏರಿಕೆಯೊಂದಿಗೆ 31,955.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 72.45 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,899.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ನಿನ್ನೆ ಮಂಗಳವಾರ ಅನುಭವಿಸಿದ್ದ ನಷ್ಟದ ಅರ್ಧಾಂಶವನ್ನು ಇಂದು ಬುಧವಾರ ಮರಳಿ ಸರಿದೂಗಿಸಿಕೊಂಡ ಸೆನ್ಸೆಕ್ಸ್‌ಗೆ ಇಂದು ವಿಶ್ವ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕ ಅಂಶಗಳು ಉತ್ತೇಜನ ನೀಡಿದವು.  ಪರಿಣಾವಾಗಿ ಎಫ್ಎಂಸಿಜಿ, ಫಾರ್ಮಾ ಮತ್ತು ಮೆಟಲ್‌ ಶೇರುಗಳು ಉತ್ತಮ ಖರೀದಿಯನ್ನು ಕಂಡವು. 

ಇಂದಿನ ಟಾಪ್‌ ಗೇನರ್‌ಗಳು : ಐಡಿಯಾ ಸೆಲ್ಯುಲರ್‌, ಅರಬಿಂದೋ ಫಾರ್ಮಾ, ಭಾರ್ತಿ ಏರ್‌ಟೆಲ್‌, ಹಿಂಡಾಲ್ಕೊ, ಝೀ ಎಂಟರ್‌ಟೇನ್‌ಮೆಂಟ್‌. ಟಾಪ್‌ ಲೂಸರ್‌ಗಳು : ಅಲ್‌ಟ್ರಾ ಟೆಕ್‌ ಸಿಮೆಂಟ್‌, ಎಸಿಸಿ, ಭಾರ್ತಿ ಇನ್‌ಫ್ರಾಟೆಲ್‌, ಅಂಬುಜಾ ಸಿಮೆಂಟ್ಸ್‌,ಇನ್‌ಫೋಸಿಸ್‌.

Advertisement

Udayavani is now on Telegram. Click here to join our channel and stay updated with the latest news.

Next