ಮುಂಬೈ: ಹೆಚ್ಚುತ್ತಿರುವ ಮಲೇರಿಯಾ ಮತ್ತು ಡೆಂಘೀ ಪ್ರಕರಣಗಳನ್ನು ತಡೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ದಿ ಗೇಟ್ಸ್ ಫೌಂಡೇಶನ್, ಮನೆ ಕೀಟ ನಿಯಂತ್ರಣ ಸಂಘ (HICA) ಗಳ ಚರ್ಚೆಯ ಫಲಿತಾಂಶವಾಗಿ, ಗೋದ್ರೆಜ್ ಗ್ರಾಹಕ ಉತ್ಪನ್ನಗಳ ಕಂಪೆನಿ ನೂತನ ಉತ್ಪನ್ನ ಹೊರ ತಂದಿದೆ.
ನಗರ ಮತ್ತು ಗ್ರಾಮೀಣ ಜನತೆಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ನ ಆರ್ & ಡಿ ತಂಡವು ಕಾಗದ ಆಧಾರಿತ ಸೊಳ್ಳೆ ನಿವಾರಕ ಗುಡನೈಟ್ ಜಂಬೋ ಫಾಸ್ಟ್ ಕಾರ್ಡ್ ಅನ್ನು ಆವಿಷ್ಕರಿಸಿದೆ. ಇದು ತ್ವರಿತ ಪರಿಹಾರ ಮತ್ತು ಸೊಳ್ಳೆಗಳಿಂದ 4 ಗಂಟೆಗಳ ರಕ್ಷಣೆ ನೀಡುತ್ತದೆ.
ಹಾನಿಕಾರಕ ರಾಸಾಯನಿಕಗಳನ್ನು ಉತ್ಪನ್ನದಲ್ಲಿ ಸಕ್ರಿಯವಾಗಿ ಬಳಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಬತ್ತಿಗಳು, ಕಾಯಿಲ್ ಗಳ ಬದಲು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಪರ್ಯಾಯ ಇದಾಗಿದೆ ಎಂದು ಕಂಪೆನಿ ತಿಳಿಸಿದೆ. ಈ ಉತ್ಪನ್ನವು ವಿದ್ಯುತ್ ಮೇಲೆ ಅವಲಂಬಿತವಾಗಿಲ್ಲ. ಗುಡ್‌ನೈಟ್ ಜಂಬೋ ಫಾಸ್ಟ್ ಕಾರ್ಡ್ 10 ಕಾರ್ಡ್‌ಗಳ ಪ್ಯಾಕ್‌ನಲ್ಲಿ ಲಭ್ಯವಿದೆ. ಇದರ ದರ 15 ರೂ. ಇದ್ದು, ಪ್ರತಿ ಕಾರ್ಡ್ ಗೆ 1.50 ರೂ. ತಗುಲುತ್ತದೆ.
ಇದನ್ನೂ ಓದಿ:ಹನಿವೆಲ್ ಬಿಡುಗಡೆ ಮಾಡಿದೆ ಎಸಿ ಕಂಟ್ರೋಲರ್, ವಿಡಿಯೋ ಕಣ್ಗಾವಲು ಹಾಗೂ ಹೊಗೆ ಪತ್ತೆ ಸಾಧನ
ಗೋದ್ರೆಜ್ ಗ್ರಾಹಕ ಉತ್ಪನ್ನಗಳ ಕಂಪೆನಿಯ ಸಿಇಒ ಸುನಿಲ್ ಕಟಾರಿಯಾ, ಮಾತನಾಡಿ, ಮನೆಯ ಕೀಟನಾಶಕ ವಿಭಾಗದಲ್ಲಿ ಗುಡ್ ನೈಟ್ ಅತ್ಯಂತ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ಪರಿಹಾರಗಳನ್ನು ನೀಡಲು ಬದ್ಧವಾಗಿದೆ. ಜಂಬೋ ಫಾಸ್ಟ್ ಕಾರ್ಡ್ ನಮ್ಮ ಇತ್ತೀಚಿನ ಆವಿಷ್ಕಾರವಾಗಿದ್ದು, ಈ ಕ್ರಾಂತಿಕಾರಿ ಪೇಪರ್-ಆಧಾರಿತ ಕಾರ್ಡ್ 4 ಗಂಟೆಗಳವರೆಗೆ ಸೊಳ್ಳೆಗಳಿಂದ ಸುರಕ್ಷೆ ನೀಡುತ್ತದೆ ಎಂದು ತಿಳಿಸಿದರು.