Advertisement
1. ಸಾಮೆ ಅಕ್ಕಿ ಗೂಡಾನ್ನ (ಬೆಲ್ಲದ ಅನ್ನ)ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಲೋಟ, ನೀರು- 2 ಲೋಟ, ಬೆಲ್ಲ- 1/2 ಲೋಟ, ತುಪ್ಪ- 1/2 ಲೋಟ, ಹಾಲು- 1/2 ಲೋಟ, ತೆಂಗಿನ ತುರಿ- 1/2 ಲೋಟ, ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷಿ, ಉಪ್ಪು-ರುಚಿಗೆ.
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ- 1/2 ಕಪ್, ಬೆಲ್ಲ-1/2 ಕಪ್, ತೆಂಗಿನ ತುರಿ- 1 ಕಪ್, ಏಲಕ್ಕಿ, ಗೋಡಂಬಿ ತುಣುಕು- 1 ದೊಡ್ಡ ಚಮಚ, ಒಣ ದ್ರಾಕ್ಷಿ- 1 ಮುಷ್ಟಿ, ತುಪ್ಪ- 1 ಚಮಚ.
Related Articles
Advertisement
3. ಸಾಮೆ ಅಕ್ಕಿ ಖಾರದ ಕಿಚಡಿ ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಕಪ್, ಹೆಸರು ಬೇಳೆ-1/2 ಕಪ್, ಸಾರಿನ ಪುಡಿ- 1 ದೊಡ್ಡ ಚಮಚ, ಹುಣಸೆ ರಸ- 1 ಚಮಚ, ಉಪ್ಪು- ರುಚಿಗೆ, ಕ್ಯಾರೆಟ್- 1, ದೊಡ್ಡ ಮೆಣಸಿನಕಾಯಿ- 1, ಬಟಾಣಿ-1/2 ಕಪ್, ತೆಂಗಿನ ತುರಿ- 1/4 ಕಪ್ (ಬೇಕಾದಲ್ಲಿ ಮಾತ್ರ), ತುಪ್ಪ-2 ಚಮಚ, ಎಣ್ಣೆ-1 ಚಮಚ, ಒಗ್ಗರಣೆಗೆ: ಸಾಸಿವೆ, ಉದ್ದಿನ ಬೇಳೆ, ಇಂಗು, ಅರಿಶಿನ ಪುಡಿ, ಕರಿಬೇವು. ಮಾಡುವ ವಿಧಾನ: ಸಾಮೆ ಅಕ್ಕಿ ಹಾಗೂ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು, ಬೇರೆಬೇರೆಯಾಗಿ ಬೇಯಿಸಿಕೊಳ್ಳಿ. ಕ್ಯಾರೆಟ್, ಬಟಾಣಿ ಹಾಗೂ ದೊಡ್ಡ ಮೆಣಸಿನ ಕಾಯಿಯನ್ನು ಹೆಚ್ಚಿ ಹದವಾಗಿ ಬೇಯಿಸಿ. ಈಗ ಒಂದು ಪಾತ್ರೆಯಲ್ಲಿ, ಬೆಂದ ಸಾಮೆ ಅಕ್ಕಿ, ಹೆಸರು ಬೇಳೆ ಹಾಗೂ ತರಕಾರಿಗಳನ್ನು ಹಾಕಿ, ಅದಕ್ಕೆ ಉಪ್ಪು, ನೀರು, ಅರಿಶಿನ ಸೇರಿಸಿ ಕುದಿಸಿ. ನಂತರ ಹುಣಸೆ ರಸ ಹಾಗೂ ಸಾರಿನ ಪುಡಿ ಹಾಕಿ ಪುನಃ 3 ನಿಮಿಷ ಕುದಿಸಿ. ಸಾಸಿವೆ, ಉದ್ದಿನ ಬೇಳೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ, ಕುದಿಯುತ್ತಿರುವ ಕಿಚಡಿಗೆ ಸೇರಿಸಿ. ತುಪ್ಪ ಹಾಗೂ ತೆಂಗಿನ ತುರಿ ಹಾಕಿ ಕೆಳಗಿಳಿಸಿ. 4. ಸಾಮೆ ಅಕ್ಕಿ ತೆಂಗಿನಕಾಯಿ ಅನ್ನ
ಬೇಕಾಗುವ ಸಾಮಗ್ರಿ: ಸಾಮೆ ಅಕ್ಕಿ-1 ಕಪ್, ನೀರು- 2 ಕಪ್, ತೆಂಗಿನ ತುರಿ- 1 ಕಪ್, ಕೆಂಪು ಮೆಣಸು-3, ಗೋಡಂಬಿ, ತುಪ್ಪ- 3 ಚಮಚ, ಉಪ್ಪು- ರುಚಿಗೆ, ಒಗ್ಗರಣೆಗೆ: ಸಾಸಿವೆ, ಉದ್ದಿನ ಬೇಳೆ, ಕರಿಬೇವು. ಮಾಡುವ ವಿಧಾನ : ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು, 2 ಕಪ್ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ. ಒಂದು ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ ಒಲೆಯ ಮೇಲಿಟ್ಟು, ಸಾಸಿವೆ, ಉದ್ದಿನ ಬೇಳೆ ಹಾಕಿ. ಸಾಸಿವೆ ಸಿಡಿದ ನಂತರ ಕೆಂಪು ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅದಕ್ಕೆ ಗೋಡಂಬಿ, ಕರಿಬೇವಿನ ಎಸಳು ಸೇರಿಸಿ, ಮೆಲ್ಲಗೆ ಕೈಯಾಡಿಸಿ. ಅದಕ್ಕೆ ತಣ್ಣಗಾದ ಸಾಮೆ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. ಸಣ್ಣ ಉರಿಯಿರಲಿ. ಈಗ ತೆಂಗಿನ ತುರಿ ಸೇರಿಸಿ, ಉಳಿದ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ಪೌಷ್ಟಿಕವಾದ ಸಾಮೆ ಅಕ್ಕಿ ತೆಂಗಿನ ಕಾಯಿ ಅನ್ನ ರೆಡಿ. ನಳಿನಿ ಸೋಮಯಾಜಿ