Advertisement

ಉತ್ತಮ ಆಹಾರ, ವ್ಯಾಯಾಮದಿಂದ ಆರೋಗ್ಯ: ಲೋಬೋ

11:04 AM Oct 12, 2017 | Team Udayavani |

ಬಲ್ಮಠ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕ ಹಾಗೂ ಅತ್ತಾವರ ಕೆಎಂಸಿ ಸಹಯೋಗದಲ್ಲಿ ಆರೋಗ್ಯ ತಪಾಸಣ ಕಾರ್ಯಕ್ರಮ ಜರಗಿತು.

Advertisement

ಶಾಸಕ ಜೆ.ಆರ್‌. ಲೋಬೋ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯ. ಉತ್ತಮ ಆಹಾರ ಹಾಗೂ ವ್ಯಾಯಾಮ ವ್ಯಕ್ತಿಯನ್ನು ಆರೋಗ್ಯ ವಂತನನ್ನಾಗಿಸುವುದರ ಜತೆಗೆ ಸದೃಢನನ್ನಾಗಿಸುತ್ತದೆ. ಯೋಗ ಆರೋಗ್ಯವಂತ ದೇಹಕ್ಕೆ ಪೂರಕ ಎಂದರು.

ಅತ್ತಾವರ ಕೆಎಂಸಿಯ ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ ಅವರು ವಿದ್ಯಾರ್ಥಿನಿಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ
ಆರೋಗ್ಯ ಸಮಸ್ಯೆ ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಆಹಾರ ಪದ್ಧತಿ-ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಭಾಕರ ಮಾತನಾಡಿದರು. ಪ್ರಾಂಶುಪಾಲ ರಮಾನಾಥ ಬಿ. ಅಧ್ಯಕ್ಷತೆ ವಹಿಸಿದ್ದರು. ಯುವ ರೆಡ್‌ಕ್ರಾಸ್‌ ಘಟಕದ ಸಂಯೋಜಕ ಚಂದ್ರಶೇಖರ ಕೆ. ಸ್ವಾಗತಿಸಿ, ನೀತಾ ವಂದಿಸಿದರು. ದಿವ್ಯಾ ನಿರೂಪಿಸಿದರು.

ನಗರ ಆರೋಗ್ಯ ಕೇಂದ್ರ ಬಂದರು ಹಾಗೂ ಅತ್ತಾವರ ಕೆಎಂಸಿ ವತಿಯಿಂದ ಉಚಿತ ದಂತ, ಕಣ್ಣಿನ ಚಿಕಿತ್ಸೆ, ಸ್ತ್ರೀರೋಗ ಹಾಗೂ ಸಾಮಾನ್ಯ ಆರೋಗ್ಯ ತಪಾಸಣ ಕಾರ್ಯಕ್ರಮ ಜರಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next