Advertisement

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

04:38 PM Sep 09, 2024 | Team Udayavani |

ಹವಾಮಾನದಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮಗಳನ್ನು ಬೀರುತ್ತಿವೆ. ವಿಪರೀತ ಬಿಸಿಲಿನ ಶಾಖ ಮತ್ತು ಹೆಚ್ಚಿರುವ ತಾಪಮಾನ ಮಾನವನ ಶರೀರದ ಮೇಲೆ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತದೆ. ಆರೋಗ್ಯಕ್ಕೆ ಹೊಸ ತೊಂದರೆಗಳು ಅಥವಾ ಈ ಹಿಂದಿನಿಂದ ಅಸ್ತಿತ್ವದಲ್ಲಿರುವ ತೊಂದರೆಗಳನ್ನು ಹೆಚ್ಚಿಸುವ ಕೆಲಸವನ್ನು ಈ ವಿಪರೀತ ಬಿಸಿಲಿನ ಶಾಖ ಮಾಡುತ್ತದೆ. ವಿಪರೀತ ಶಾಖವು ದೇಹಕ್ಕೆ ಮಾರಕವಾಗಬಹುದು. ಈ ವರ್ಷ ದೇಶದ ವಿವಿಧ ರಾಜ್ಯ ಮತ್ತು ಪ್ರಾಂತ್ಯಗಳಿಂದ ವಿಪರೀತ ತಾಪಮಾನದ ದಾಖಲೆಗಳು ಗಮನಕ್ಕೆ ಬಂದಿವೆ.

Advertisement

ಇದರ ಲಕ್ಷಣಗಳು:

ವಾಂತಿ

ವೇಗವಾದ ಉಸಿರಾಟ

ವೇಗವಾದ ಹೃದಯ ಬಡಿತ

Advertisement

ಕೈಕಾಲುಗಳ ಸೆಳೆತ

ಬಿಸಿಲಿನ ಶಾಖದಿಂದ ಅನೇಕ ತೊಂದರೆಗಳು ಉಂಟಾಗಬಹುದು. ಅದರಲ್ಲಿ ಅತ್ಯಂತ ತುರ್ತು ಪರಿಸ್ಥಿತಿ ಎಂದರೆ ಬಿಸಿಲಾಘಾತ. ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಇದು ಮಾರಣಾಂತಿಕವಾಗಿ ಪರಿಣಮಿಸಬಹುದು. ಇದರ ಲಕ್ಷಣಗಳನ್ನು ಎಲ್ಲರೂ ತಿಳಿದಿರಬೇಕು ಮತ್ತು ಇದರ ಪ್ರಥಮ ಚಿಕಿತ್ಸೆಯ ಬಗ್ಗೆಯೂ ಎಲ್ಲರೂ ತಿಳಿದಿರಬೇಕು. ಬಿಸಿಲಿನ ಶಾಖದಿಂದ ದೇಹದ ತಾಪಮಾನವು ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ನಿರ್ಜಲೀಕರಣದ ಪರಿಣಾಮವಾಗಿ ಸ್ಟ್ರೋಕ್‌ ಸಂಭವಿಸುತ್ತದೆ.

ರೋಗಿಯಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ

ಆ್ಯಂಬುಲೆನ್ಸ್‌ಗೆ ಕರೆ ಮಾಡುವುದು

ರೋಗಿಯ ಬಟ್ಟೆಗಳನ್ನು ಸಡಿಲಗೊಳಿಸಬೇಕು

ದೇಹದ ಮೇಲೆ ತಂಪು ನೀರಿನಲ್ಲಿ ಒದ್ದೆ ಮಾಡಿರುವ ಬಟ್ಟೆ ಹಾಕಿ

ರೋಗಿಯು ಪ್ರಜ್ಞೆ ಹೊಂದಿದ್ದರೆ ಕುಡಿಯಲು ನೀರು ಕೊಡಿ

ಪ್ರಜ್ಞೆ ಇಲ್ಲದಿದ್ದರೆ ಅಥವಾ ಮಂಪರು ಪರಿಸ್ಥಿತಿ ಇದ್ದಲ್ಲಿ ಬಾಯಿಗೆ ಏನೂ ಕೊಡಬೇಡಿ.

ಬೇಸಗೆಯಲ್ಲಿ ಆರೋಗ್ಯವನ್ನು ಕಾಪಾಡಲು ಮಾಡಬೇಕಾದಂತಹ ಕೆಲಸಗಳು

ನಿಗದಿತ ಪ್ರಮಾಣದಲ್ಲಿ ನೀರು ಸೇವಿಸಬೇಕು

ಸಹಜ ಆರೋಗ್ಯವಂತರು ದಿನಕ್ಕೆ ಕನಿಷ್ಟ 3 ಲೀಟರ್‌ ನೀರು ಸೇವಿಸಬೇಕು. ಕಿಡ್ನಿ, ಹೃದಯ ತೊಂದರೆ ಇದ್ದವರು ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ನೀರು ಸೇವಿಸಬೇಕು.

ವ್ಯವಹಾರ/ ವ್ಯಾಪಾರ ಇನ್ನಿತರ ಕೆಲಸಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯ ಒಳಗೆ ಹಾಗೂ ಸಂಜೆ 4 ಗಂಟೆಯ ಅನಂತರ ಮಾಡುವುದು ಉತ್ತಮ

ಕೆಲಸದ ಜಾಗದಲ್ಲಿ ಹವಾನಿಯಂತ್ರಣ ಯಂತ್ರವನ್ನು ಬಳಸಿ. ದಿನದ ಹೊತ್ತಿನಲ್ಲಿ ಕೋಣೆಯ ತಾಪಮಾನ 30 ಡಿಗ್ರಿ ಸೆ.ಗಿಂತ ಕಡಿಮೆ ಮತ್ತು ರಾತ್ರಿ ಹೊತ್ತಿನಲ್ಲಿ 24 ಡಿಗ್ರಿ ಸೆ. ಕಡಿಮೆ ಇರಬೇಕು.

ಸಮಯ ಸಿಕ್ಕರೆ ದಿನದ ಹೊತ್ತಿನಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆಯಿರಿ

ಹೊರಾಂಗಣದ ಚಟುವಟಿಕೆಗಳನ್ನು ಮಿತಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಸ್ವತ್ಛ ನೀರಿನ ವ್ಯವಸ್ಥೆ ಮಾಡಿ.

ಕನಿಷ್ಟ ಮನೆಯ ಅಂಗಳದಲ್ಲಿ ಅಥವಾ ನಿಮ್ಮ ಬಾಲ್ಕನಿಯಲ್ಲಿ ಪ್ರತಿದಿನ ಸ್ವತ್ಛ ಪಾತ್ರೆಯಲ್ಲಿ ಸ್ವತ್ಛ ನೀರನ್ನು ಪಕ್ಷಿಗಳಿಗಾಗಿ ಇಡಿ.

Advertisement

Udayavani is now on Telegram. Click here to join our channel and stay updated with the latest news.