Advertisement

ಸಾವಯವ ಗೊಬ್ಬರದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ

08:59 PM Jun 01, 2019 | Lakshmi GovindaRaj |

ಸೋಮೇನಹಳ್ಳಿ: ರೈತರು ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಬಳಸದೆ ಕೊಟ್ಟಿಗೆ ಗೊಬ್ಬರ, ತಿಪ್ಪೆ ಗೊಬ್ಬರಗಳನ್ನು ಬಳಸುವುದರ ಮೂಲಕ ಸಾವಯವ ಕೃಷಿ ಮಾಡಬೇಕೆಂದು ರೈತರಿಗೆ ಚಿಕ್ಕಬಳ್ಳಾಪುರ ಉಪ ಕೃಷಿ ನಿರ್ದೇಶಕಿ ಎಂ.ಅನುರೂಪ ರೈತರಿಗೆ ಸಲಹೆ ನೀಡಿದರು.

Advertisement

ಗುಡಿಬಂಡೆ ತಾಲೂಕು ಸೋಮೇನಹಳ್ಳಿ ಹೋಬಳಿ ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೃಷಿ ಇಲಾಖೆ, ಗುಡಿಬಂಡೆ ಮತ್ತು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ಆಶ್ರಯದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ಅಡಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಫ‌ಲವತ್ತತೆ ಹೆಚ್ಚಳ: ರೈತರು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬೆಳೆಗಳಿಗೆ ಬಳಸುವ ಮೂಲಕ ಭೂಮಿಯ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಈ ಬೆಳೆಗಳನ್ನು ಉಪಯೋಗಿಸುವುದರಿಂದ ಆರೋಗ್ಯವೂ ಸಹ ಹದಗೆಡುತ್ತಿದೆ.

ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ದೇಶೀ ಹಸು(ನಾಟಿ ಹಸು)ಗಳ ಸಗಣಿ, ಗಂಜಲ, ಬೇವಿನ ಸೊಪ್ಪು, ಹೊಂಗೆಸೊಪ್ಪು, ಬೇವಿನ ಕಷಾಯ, ಬೇವಿನ ಹಿಂಡಿ ಮುಂತಾದವುಗಳನ್ನು ಭೂಮಿಗೆ ನೀಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುವುದು. ಉತ್ತಮ ಫಸಲೂ ಸಹ ಬರುವುದರ ಜೊತೆಗೆ ಆಹಾರ ಧಾನ್ಯಗಳು ತಿನ್ನಲು ರುಚಿಯಾಗಿರುತ್ತದೆ ಎಂದು ಹೇಳಿದರು.

ಹಸಿರು, ರಾಗಿ ಹುಲ್ಲು ನೀಡಿ: ರೈತರು ದೇಶೀಯ ಬೀಜಗಳನ್ನು ಬಿತ್ತುವುದರಿಂದ ಕಡಿಮೆ ಬಂಡವಾಳ ಹಾಕಿದರೆ ಸಾಕು. ದೇಶೀ ಹಸುಗಳು ಕಡಿಮೆಯಾಗಿ ಸೀಮೆ ಹಸುಗಳನ್ನು ಹೆಚ್ಚಾಗಿ ಸಾಕುತ್ತಿರುವುದರಿಂದ ಹಾಲು ಸಹ ರುಚಿಯಿಲ್ಲದಂತಾಗಿದೆ. ಇದರ ಲಾಲನೆ, ಪಾಲನೆಯೂ ಸಹ ಕಷ್ಟವಾಗಿ ಹೆಚ್ಚಿನ ಖರ್ಚು ಬರುತ್ತದೆ. ಆದರೆ ನಾಟಿ ಹಸುಗಳಿಗೆ ಹಸಿರು ಹುಲ್ಲು, ರಾಗಿ ಹುಲ್ಲು, ಭತ್ತದ ಹುಲ್ಲು ಹಾಕಿದರೆ ಉತ್ತಮ ಹಾಲು, ತುಪ್ಪ, ಮಜ್ಜಿಗೆ ಪಡೆಯಬಹುದಾಗಿದೆ ಎಂದರು.

Advertisement

ಜಾನುವಾರುಗಳಿಗೆ ಬಹು ವಾರ್ಷಿಕ ಮೇವಿನ ಬೆಳೆ ಬೆಳೆದುಕೊಳ್ಳಲು ಅರಣ್ಯ ಸಸಿ, ಮರಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಆಯಾ ಗ್ರಾಮಗಳಲ್ಲಿ ದೇಶೀಯ ತಳಿ ಹುರಳಿ, ಅವರೆ, ಅಲಸಂಧೆ ಮುಂತಾದವುಗಳನ್ನು ಶೇಖರಿಸಿಟ್ಟುಕೊಂಡು ಬೀಜಗಳ ಬ್ಯಾಂಕ್‌ನ್ನು ಮಾಡಿಕೊಳ್ಳಬಹುದು ಎಂದರು.

ಗುಡಿಬಂಡೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಅನೀಸ್‌ ಸಲ್ಮಾ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಟ್ಟ ಮೊದಲು ಸೋಮೇನಹಳ್ಳಿ ಹೋಬಳಿಯ ಕಮ್ಮಡಿಕೆ, ಕಾಟೇನಹಳ್ಳಿ, ಚಿಕ್ಕನಂಚೆರ್ಲು ಗ್ರಾಮಗಳನ್ನು ಸಾವಯವ ಕೃಷಿಗೆ ಆಯ್ಕೆ ಮಾಡಿಕೊಂಡು ತರಬೇತಿಯನ್ನು ರೈತರಿಗೆ ನೀಡುತ್ತಿದ್ದೇವೆ.

ಆತ್ಮ ಯೋಜನೆಯ ಅಡಿಯಲ್ಲಿ ಈ ಗ್ರಾಮಗಳನ್ನು ಮಾದರಿ ಗ್ರಾಮಗಳೆಂದು ಪರಿಗಣಿಸಿ 100 ಹೆಕ್ಟೇರ್‌ ಭೂಮಿಯಲ್ಲಿ ಮಣ್ಣು ಮಾದರಿ9ಗಳನ್ನು ತೆಗೆದಿದ್ದೇವೆ ಎಂದು ಹೇಳಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಹ ಸಂಶೋಧಕಿ ಲಾವಣ್ಯ ಬೀಜಾಮೃತ, ಘನಜೀವಾಮೃತ ತಯಾರಿಕೆಯ ಬಗ್ಗೆ ರೈತರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next