ಬೀದರ: ಉತ್ತಮ ಸಂವಹನವು ಸಮಾಜದಲ್ಲಿ ನಮ್ಮ ಬೆಲೆಯನ್ನೂ ಹೆಚ್ಚಿಸುತ್ತದೆ ಎಂದು ಉಪನ್ಯಾಸಕಿ ಡಾ| ವಿದ್ಯಾ ಪಾಟೀಲ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ನಡೆದ ಕಮ್ಯುನಿಕೇಷನ್ ಸ್ಕಿಲ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಹನ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ, ಕಿರಿಕಿರಿ ಉಂಟಾಗಿ, ನಕಾರಾತ್ಮಕ ಭಾವನೆಗಳು ಮೂಡುವಂತಾಗುತ್ತದೆ. ಮಾತಿನ ಕೌಶಲವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದರು.
ಸ್ವಯಂ-ಕಲಿಕೆ ತಂತ್ರಜ್ಞಾನ ಬಳಕೆ ಯಾವುದೇ ಮಾಹಿತಿಯನ್ನು ಕಲೆ ಹಾಕುವಾಗ ಅಥವಾ ಮಾಹಿತಿಗಳನ್ನು ತಿಳಿದುಕೊಳ್ಳುವಾಗ ಇತರರನ್ನು ಅವಲಂಬಿಸದಿರಿ. ಇತ್ತೀಚಿನ ದಿನಗಳಲ್ಲಿ ಸೆಲ್ ಲನಿಂìಗ್ ಕಮ್ಯುನಿಕೇಷನ್ ಆ್ಯಪ್‌ಗ್ಳು ಪ್ಲೇಸ್ಟೋರ್‌ಗಳಲ್ಲಿ ಲಭ್ಯವಿದೆ. ಇಂತಹ ಆ್ಯಪ್‌ಗ್ಳನ್ನು ಬಳಕೆ ಮಾಡುವ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು. ವಿವಿಧ ರೀತಿಯ ಜನರೊಂದಿಗೆ ಬೆರೆತಾಗ, ಸಾಂಸ್ಕೃತಿಕ ಮತ್ತು ಸಭೆ-ಸಮಾರಂಭಗಳಲ್ಲಿ ಮಾತನಾಡುವ ಮುನ್ನ ಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಾಮಾನ್ಯ ಜ್ಞಾನ, ಕಂಪ್ಯೂಟರ್ ಮತ್ತು ಇಂಗ್ಲಿಷ್ ಜ್ಞಾನಬೇಕು. ಸಂಪರ್ಕ ಭಾಷೆಯಾಗಿರುವ ಇಂಗ್ಲಿಷ್ ಅಗತ್ಯವಾಗಿದೆ. ಕಠಿಣ ಪರಿಶ್ರಮ ಇಲ್ಲದೇ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಚಲುವಾ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ವಿಭಾಗದ ಮುಖ್ಯಸ್ಥೆ ಗೀತಾ ರಾಗ ಮಾತನಾಡಿದರು. ಉಪನ್ಯಾಸಕ ಆನಂದ ನಿರೂಪಿಸಿದರು. ಅಶ್ವಿನಿ ವಂದಿಸಿದರು.