Advertisement

ಗ್ರಾಪಂ ನಿವೇಶನ ಹಂಚಿಕೆಯಲ್ಲಿ ಗೋಲ್‌ಮಾಲ್‌!

04:32 PM Dec 18, 2017 | Team Udayavani |

ಜಮಖಂಡಿ: ತಾಲೂಕಿನ ಕನ್ನೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರತಕ್ಕ ಬಡವರಿಗೆ, ಫಲಾನುಭವಿಗಳಿಗೆ ಸರಕಾರ ಹಾಗೂ ಶಾಸಕರ ಪ್ರಯತ್ನದಿಂದ ಮಂಜೂರಾಗಿದ್ದ ನಿವೇಶನಗಳು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಕಬಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಡಿ 2012 ರಿಂದ 2017ರವರೆಗೆ ಆಶ್ರಯ ಯೋಜನೆ ಮನೆಗಳು ಎಷ್ಟು ಮಂಜೂರಾಗಿವೆ. ಯಾವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಮಾಹಿತಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.
ಕನ್ನೊಳ್ಳಿ ಪಿಡಿಒ ಪ್ರಕಾರ ಮಾಹಿತಿ ಹಕ್ಕು ಅಧಿನಿಯಮದಲ್ಲಿ ತಾವು ತಿಳಿಸಿರುವ ಅವಧಿಯಲ್ಲಿ ಸರಕಾರದಿಂದ ಯಾವುದೇ ರೀತಿಯ ಆಶ್ರಯ ಮನೆಗಳು ಮಂಜೂರಾಗಿರುವುದಿಲ್ಲ. ಫಲಾನುಭವಿಗಳಿಗೆ ಕೂಡ ಹಂಚಿಕೆ ಮಾಡಿರುವುದಿಲ್ಲ ಎಂದು ಉತ್ತರ ನೀಡಿದ್ದಾರೆ. 

ರಾಜ್ಯ ಸರಕಾರದ ಪಂಚಾಯತ್‌ ರಾಜ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಪಂಚತಂತ್ರ ಯೋಜನೆ ಕಂಪ್ಯೂಟರ್‌ ಸಾಫ್ಟ್‌ವೇರ್‌ದಲ್ಲಿ ಕನ್ನೊಳ್ಳಿ ಗ್ರಾಪಂಗೆ ಸಂಬಂಧಿ ಸಿದ ಗದ್ಯಾಳ, ಕುರಗೋಡ ಕನ್ನೊಳ್ಳಿ ಗ್ರಾಮಗಳಲ್ಲಿ ಹಂಚಿಕೆಯಾಗಿರುವ ಫಲಾನುಭವಿಗಳ ಹೆಸರು, ಗ್ರಾಮದ ವಿವರ ಸಹಿತ ಎಲ್ಲ ಮಾಹಿತಿ ಲಭ್ಯವಿದೆ. ಕುರಗೋಡದಲ್ಲಿ ಸರಕಾರದಿಂದ ಮಂಜೂರಾದ ಆಶ್ರಯ ಯೋಜನೆಯಲ್ಲಿ ಗ್ರಾಪಂ
ಅಧ್ಯಕ್ಷರು ತಮ್ಮ ಹೆಸರಿನಲ್ಲಿ ಎರಡು ನಿವೇಶನ ಪಡೆದುಕೊಂಡಿದ್ದು ಮಾಹಿತಿ ಬಹಿರಂಗಗೊಂಡಿದೆ. ಅದರಂತೆ ಸದಸ್ಯರು ತಮ್ಮ ಸಂಬಂಧಿ ಕರ ಹೆಸರಿನಲ್ಲಿ ಪಡೆದುಕೊಂಡಿದ್ದಾರೆಂದು ಗ್ರಾಮಸ್ಥರು ಹಾಗೂ ಮಾಹಿತಿ ಹಕ್ಕುದಾರರು ಆರೋಪಿಸಿದ್ದಾರೆ.

ಾಪಂ ಸಾಮಾನ್ಯ ಸಭೆಯಲ್ಲಿ ಕನ್ನೊಳ್ಳಿ, ಸಿದ್ದಾಪುರ ಸಹಿತ ವಿವಿಧ ಗ್ರಾಪಂಗಳಲ್ಲಿ ಬಡವರಿಗೆ, ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ಚರ್ಚೆಯಾಗಿದೆ. ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ನೈಜ ಫಲಾನುಭವಿಗಳಿಗೆ ನಿವೇಶನ, ಕಟ್ಟಡ ಸಹಾಯಧನ ಸರಿಯಾಗಿ ತಲುಪುತ್ತಿಲ್ಲವೆಂದು ಸಭೆಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ. ಯಾವ ಮಾನದಂಡ ಮೂಲಕ ಫಲಾನುಭವಿಗಳ ಆಯ್ಕೆಗೊಂಡಿದೆ ಪರಿಶೀಲಿಸಿ, ಮೇಲಾಧಿ ಕಾರಿಗಳ ಗಮನಕ್ಕೆ ತರುವ ಮೂಲಕ ಪ್ರಾಮಾಣಿಕ ತನಿಖೆ ನಡೆಸಿ ಅರ್ಹ ಫಲಾನುಭಗಳಿಗೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
ಎನ್‌.ವೈ. ಬಸರಿಗೀಡದ, ತಾಪಂ ಇಒ

ತಾಲೂಕಿನ ಬಹುತೇಕ ಗ್ರಾಪಂ ಅರ್ಹ ಫಲಾನುಭವಿಗಳಿಗೆ ನಿವೇಶನ, ಕಟ್ಟಡ ಸಹಾಯಧನ ತಲುಪುತ್ತಿಲ್ಲ. ಸರಕಾರದ ಎಲ್ಲ ಅನುದಾನಗಳು ಬಹುತೇಕ ಗ್ರಾಪಂ ಸದಸ್ಯರ, ಮಧ್ಯವರ್ತಿಗಳ ಅಥವಾ ಇನ್ನಾವುದೋ ಮೂಲದಿಂದ ಬೇರೆಯರ ಪಾಲಾಗುತ್ತಿದ್ದು, ಬಡವರು ಬಡವರಾಗಿಯೇ ಉಳಿದುಕೊಂಡಿದ್ದಾರೆ. ತಾಪಂ ಇಒ ಸೂಕ್ತ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಬೇಕು.
ಶ್ರೀಮಂತ ಚೌರಿ, ತಾಪಂ ಸದಸ್ಯರು, ತೊದಲಬಾಗಿ.

Advertisement

ಮಲ್ಲೇಶ ರಾ. ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next