Advertisement
ಕಾಡು ಗೊಲ್ಲ ಸಮುದಾಯದವರು ಈ ಹಿಂದೆ ಅಲೆಮಾರಿಗಳು ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದರು, ಕುರಿ ಸಾಕಾಣಿಕೆ, ಹೈನುಗಾರಿಗೆ ಇವರ ಮೂಲ ಕಸಬು. ಅಲ್ಲಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಈ ಜನರ ಜತೆಯಲ್ಲಿ ಕುರಿ, ಮೇಕೆ, ಹಸುಗಳು ಎಲ್ಲವೂ ಒಟ್ಟಿಗೆ ಇರುತ್ತಿದ್ದವು, ಈ ವೇಳೆಯಲ್ಲಿ ಋತುಮತಿಯಾದರೆ ಮತ್ತು ಬಾಣಂತಿಯಾದರೆ ಅವರ ಆರೋಗ್ಯದ ಮೇಲೆ ತೊಂದರೆ ಉಂಟಾ ಗುತ್ತದೆ ಎಂದು ಈ ಹಿಂದೆ ಪೂರ್ವಿಕರು ಅವರು ಬೇರೆ ಕಡೆ ಗುಡಿಸಲು ನಿರ್ಮಿಸಿ ಅಲ್ಲಿ ಸೌಲಭ್ಯ ಕಲ್ಪಿಸಿ ಇರಿಸುತ್ತಿದ್ದರು.
Related Articles
Advertisement
ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಆಗ ತಾನೇ ಹುಟ್ಟಿದ ಹಸುಗೂಸು ಮತ್ತು ಬಾಣಂತಿ ಇರಬೇಕು. ಆ ವೇಳೆ ವಿಷಜಂತುಗಳು, ಕಾಡು ಪ್ರಾಣಿಗಳ ಭಯ ಇರುತ್ತದೆ. ಜತೆಗೆ ವಾತಾ ವರಣದ ಏರು ಪೇರಿನಿಂದ ಬಾಣಂತಿಗೆ ಮತ್ತು ಮಗುವಿಗೆ ಕಾಯಿಲೆಗಳು ಕಾಣುತ್ತವೆ. ಇದರಿಂದ ಸಾವು ನೋವುಗಳು ಅಧಿಕವಾಗಿರುತ್ತವೆ.
ಈಗ ತುಮಕೂರು ತಾಲೂಕಿನ ಮಲ್ಲೇನ ಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಬಾಣಂತಿ ಮಗುವನ್ನು ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಇಟ್ಟ ಪರಿಣಾಮ ತೀವ್ರ ಶೀತದಿಂದ ಗುಡಿಸಲಿ ನಲ್ಲಿ ಇಟ್ಟಿದ್ದ ಮಗು ಸಾವನ್ನಪ್ಪಿತ್ತು, ಆದರೂ ಸೂತಕ ಎಂದು ಬಾಣಂತಿಯನ್ನು ಗುಡಿಸಲಿನ ಲ್ಲಿಯೇ ಇರಿಸಲಾಗಿತ್ತು, ಈ ಪ್ರಕರಣ ಮಾಧ್ಯಮಗಳಲ್ಲಿ ಬರುತ್ತಲೇ ನ್ಯಾಯಾಧೀಶರು ಗೊಲ್ಲರ ಹಟ್ಟಿಗೆ ಭೇಟಿ ನೀಡಿ ಗುಡಿಸಲುತೆರವು ಗೊಳಿಸಿ ಹಟ್ಟಿಯ ಜನರಲ್ಲಿ ಜಾಗೃತಿ ಮೂಡಿಸಿ ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿಯ ಅಪ್ಪ, ಅಮ್ಮ ಮತ್ತು ಗಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೈಕ್ಷಣಿಕ ಪ್ರಗತಿ ಸಾಧಿಸಿರುವ ಹಲವು ಗೊಲ್ಲರ ಹಟ್ಟಿಗಳಲ್ಲಿ ಇಂತಹ ಮೌಢ್ಯ ಪದ್ದತಿ ದೂರವಾಗಿದೆ. ಆದರೆ ಶಿಕ್ಷಣ ಇಲ್ಲದ ಹಲವು ಹಟ್ಟಿಗಳಲ್ಲಿ ಇಂತಹ ಮೌಡ್ಯ ಪದ್ಧತಿ ಇಂದಿಗೂ ಇದ್ದು ಈ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯತೆ ಇದೆ.
ಚಿ.ನಿ.ಪುರುಷೋತ್ತಮ್