Advertisement

ಕೋವಿಡ್-19 ಸಮಯದಲ್ಲಿ ಗಾಲ್ಫ್ ಕ್ಯಾಡಿಗಳ ಸಂಕಟ ಕೇಳುವವರಾರು? ಯಾರು ಕ್ಯಾಡಿಗಳು?

11:47 AM Apr 12, 2020 | keerthan |

ಹೊಸದಿಲ್ಲಿ: ಕೋವಿಡ್-19 ಸೋಂಕಿನ ಹಿನ್ನಲೆ ಸದ್ಯದ ದಿಗ್ಬಂಧನ ಎಲ್ಲರನ್ನೂ ಕಾಡುತ್ತಿದೆ. ಬಹುಶಃ ಪರಿಸ್ಥಿತಿ ಸುಧಾರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಕಷ್ಟದ ದಿನಗಳು ಕಾದಿರಬಹುದು. ಆದರೆ ದೇಶದ ಗಾಲ್ಫ್ ಅಂಕಣಗಳಲ್ಲಿ ದಿನದಿನದ ಪಾವತಿಯನ್ನೇ ನಂಬಿಕೊಂಡು ಕೆಲಸ ಮಾಡುವ ಕೆಲಸಗಾರರ ಪರಿಸ್ಥಿತಿ ಈಗಲೇ ಪಾತಾಳಕ್ಕೆ ಮುಟ್ಟಿದೆ.

Advertisement

ಗಾಲ್ಫ್ ಕ್ಯಾಡಿಗಳೆಂದರೆ ಗಾಲ್ಫರ್ ಗಳ ಬ್ಯಾಗ್ ಗಳನ್ನು ಹೊತ್ತುಕೊಂಡು ಅವರ ಹಿಂದೆ ಹೋಗುತ್ತಾರೆ. ಸ್ಪರ್ದೆಗಳು ನಡೆಯುವಾಗ ಅದರ ಮಾಹಿತಿ ನೀಡುತ್ತಾರೆ. ಇದನ್ನು ಮಾಡಬಾರದು, ಇದನ್ನು ಮಾಡಬಹುದು ಎಂಬ ಮಾಹಿತಿ ಸಲಹೆ ನೀಡುತ್ತಾರೆ. ಇದು ಗಾಲ್ಫರ್ ಗಳಿಗೆ ಮುಖ್ಯವಾಗಿರುತ್ತದೆ.

ಈಗ ಲಾಕ್ ಡೌನ್ ಇರುವಾಗ ಈ ಕ್ಯಾಡಿಗಳಿಗೆ ಕೆಲಸವಿಲ್ಲ. ಇವರು ಮನೆ ಬಾಡಿಗೆ ಕಟ್ಟಬೇಕು. ಸಂಸಾರ ಸಾಗಬೇಕು. ಅವೆಲ್ಲವೆನ್ನೂ ದಿನದಿನದ ಹಣ ನಂಬಿಕೊಂಡೇ ಮಾಡಬೇಕು. ಈಗ ದೇಶದ ಗಾಲ್ಫ್ ಕ್ಲಬ್ ಗಳೆಲ್ಲ ಬಾಗಿಲು ಹಾಕಿರುವುದರಿಂದ ಅವರಲ್ಲ ಏನು ಮಾಡಬೇಕು?

ರಾಜಧಾನಿ ದೆಹಲಿಯಲ್ಲಿ 2500ರಿಂದ 3000 ಕ್ಯಾಡಿಗಳು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಎಲ್ಲೋ 100, 200 ಮಂದಿಯನ್ನು ಬಿಟ್ಟರೆ ಉಳಿದವರು ಪೂರ್ಣಕಾಲಿಕವಾಗಿ ಈ ಸಂಪಾದನೆಯನ್ನೇ ನಂಬಿಕೊಂಡವರು. ಇಡೀ ದೇಶದಲ್ಲಿ ಶೇ. 95ರಷ್ಟು ಮಂದಿ ಕ್ಯಾಡಿಗಳು ಈಗ ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಐದರಷ್ಟು ಮಂದಿ ತಿಂಗಳಿಗೆ 20 ರಿಂದ 25 ಸಾವಿರ ದುಡಿಯುತ್ತಿದ್ದವರು ಈಗ ಪರವಾಗಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next