ತ್ರಿಶೂರು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಕೇರಳ ರಾಜ್ಯದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಕೃಷ್ಣ ದೇವಸ್ಥಾನಕ್ಕೆ ಸಹೋದರಿ ಜಯಂತಿ ಹಾಗೂ ಆಪ್ತ ಬಂಧುಗಳ ಜತೆಗೂಡಿ ದೇವಸ್ಥಾನದಲ್ಲಿ ಸಾಮಿ ದರ್ಶನ ಪಡೆದರು.
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಮಹತ್ವದ ಕಾಣಿಕೆಯೊಂದನ್ನು ಸಮರ್ಪಿಸಿದ್ದಾರೆ.
ಗುರುವಾರ ಕುಟುಂಬ ಸಮೇತ ಭೇಟಿ ನೀಡಿದ ಅವರು ದೇವಸ್ಥಾನಕ್ಕೆ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದರು. ಇದರ ಜೊತೆಗೆ ಶ್ರೀಗಂಧವನ್ನು ಅರೆಯುವ ಯಂತ್ರವನ್ನೂ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಈ ಯಂತ್ರದ ಬೆಲೆ ಅಂದಾಜು ಎರಡು ಲಕ್ಷ ರೂ.
ದೇವಸ್ವಂ ಅಧ್ಯಕ್ಷ ಡಾ.ವಿ.ಕೆ.ವಿಜಯನ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸಿ.ಮನೋಜ್, ಆಡಳಿತಾಧಿಕಾರಿ ಕೆ.ಪಿ.ವಿನಯನ್ ಮತ್ತು ದೇವಸ್ಥಾನದ ಡಿ.ಎ.ಪಿ.ಮನೋಜ್ ಕುಮಾರ್ ಅವರು ದುರ್ಗಾ ಸ್ಟಾಲಿನ್ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿದರು.
ದುರ್ಗಾ ಸ್ಟಾಲಿನ್ ಅವರು ಗುರುವಾಯೂರಿನಲ್ಲಿರುವ ಗುರುವಾಯೂರಪ್ಪನ್ ದೇವರ ಕಟ್ಟಾ ಭಕ್ತರಾಗಿದ್ದಾರೆ ಮತ್ತು ಹಲವಾರು ಬಾರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Rakshit shetty: ಒಂದಲ್ಲ,ನಾಲ್ಕು!.. ಈ ವರ್ಷ ರಕ್ಷಿತ್ ಶೆಟ್ಟಿ ಪರಂವದಿಂದ ಅದ್ಧೂರಿ ರಿಲೀಸ್