Advertisement

Gold theft: ಉದ್ಯಮಿಯ ಚಿನ್ನಾಭರಣವಿದ್ದ ಸೂಟ್‌ಕೇಸ್‌ ಕದ್ದ ಡ್ರೈವರ್‌

12:11 PM Sep 03, 2023 | Team Udayavani |

ಬೆಂಗಳೂರು:  ಮದುವೆಗೆಂದು ನಗರಕ್ಕೆ ಬಂದಿದ್ದ ಚೆನ್ನೈ ಮೂಲದ ಉದ್ಯಮಿಯೊಬ್ಬರ ಕುಟುಂಬ ಸದಸ್ಯರ ಚಿನ್ನಾಭರಣ ಕಳವು ಮಾಡಿದ್ದ ಕ್ಯಾಬ್‌ ಚಾಲಕನನ್ನು ಯಲಹಂಕ ನ್ಯೂಟೌನ್‌ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಾನುಕುಂಟೆ ನಿವಾಸಿ ನಂದೀಶ್‌ (36) ಬಂಧಿತ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 485 ಗ್ರಾಂ ಚಿನ್ನಾಭರಣ, 17.5 ಕ್ಯಾರೆಟ್‌ ತೂಕದ ವಜ್ರದ ಆಭರಣಗಳನ್ನು ವಶಪಡಿಸಿ­ಕೊಳ್ಳಲಾಗಿದೆ.

ಆ.21ರಂದು ಉದ್ಯಮಿಯೊಬ್ಬರು ಸಂಬಂಧಿಕರ ಮದುವೆಗೆಂದು ಚೆನ್ನೈನಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಆರೋಪಿ ನಂದೀಶನ ಕಾರನ್ನು ಬಾಡಿಗೆ ಪಡೆದಿದ್ದರು. ಉದ್ಯಮಿ ನಗರದ ಯಲಹಂಕ ನ್ಯೂಟೌನ್‌ ಬಳಿಯ ಹೊಟೇಲ್‌ ನಲ್ಲಿ ಉಳಿದುಕೊಂಡಿದ್ದರು. ಮದುವೆ ಮುಗಿಸಿ ಉದ್ಯಮಿ ವಾಪಸು ತೆರಳುವ ವೇಳೆ ಒಡವೆಗಳಿದ್ದ ಸೂಟ್‌ಕೇಸ್‌ ಅನ್ನು ಕಾರಿನಲ್ಲಿರಿಸಿ, ರೂಮ್‌ ಕೀ ಹಿಂದಿರುಗಿಸಿ ಬರಲು ಹೋದಾಗ ಆರೋಪಿ ಉದ್ಯಮಿಯ ಚಿನ್ನಾಭರಣ ಇಟ್ಟಿದ್ದ ಸೂಟ್‌ಕೇಸ್‌ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಉದ್ಯಮಿ ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next