Advertisement

Robbery Case ಬಂಗಾರ ನೀಡುವುದಾಗಿ ವಂಚಿಸಿ ದರೋಡೆ: ಆರೋಪಿಗಳ ಬಂಧನ

09:45 PM Aug 08, 2024 | Team Udayavani |

ಶಿರಸಿ: ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಆರೋಪಿತರನ್ನು ಬಂಧಿಸಿ ಅವರಿಂದ 7.63 ಲಕ್ಷ ರೂ. ಹಾಗೂ 3 ಮೋಟರ್‌ ಸೈಕಲ್‌ ವಶಪಡಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ಶಿರಸಿ ಪೊಲೀಸರ ಕಾರ್ಯ ಶ್ಲಾಘಿಸಿದರು.

Advertisement

ಗುರುವಾರ(ಆ.08) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆ. 4ರಂದು ಶಿರಸಿ ಮಳಲಗಾಂವ ಬಳಿ ದರೋಡೆ ನಡೆದಿತ್ತು. ಕೇರಳದಿಂದ ಬಂದ ಇಬ್ಬರು ಬಂಗಾರ ನೀಡುವುದಾಗಿ ವಂಚಿಸಿ 9.11 ಲಕ್ಷ ರೂ ಎಗರಿಸಿದ್ದರು. ಈ ಕುರಿತು ಕೇರಳದ ಮಲಪುರಂದ ಸಚಿನ್‌ ಶಿವಾಜಿ ಗಾಯಕವಾಡ ಅವರು ಎಂಟು ಜನರ ವಿರುದ್ಧ ಬನವಾಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಏನಿದು ಘಟನೆ?: ಆರೋಪಿತರಲ್ಲಿ ಓರ್ವ ವಿಕಲಚೇತನ ವ್ಯಕ್ತಿ ಬಂಗಾರ ಕೊಡುವುದಾಗಿ ಹೇಳಿ ವಿಶ್ವಾಸದಿಂದ ಮಾತನಾಡಿ ತಿಂಗಳ ಮೊದಲು 800 ಮಿಲಿ ಬಂಗಾರ ನೀಡಿದ್ದ. ಬಳಿಕ ಸಚಿನ್‌ ತನ್ನ ಊರಿಗೆ ಹೊಗಿ ಪರೀಕ್ಷಿಸಿ ನೋಡಿ ಬಂಗಾರ ಎಂದು ಖಚಿತಗೊಂಡು ಆರೋಪಿತನಿಗೆ ಕರೆ ಮಾಡಿ ಬಂಗಾರ ಬೇಕು ಎಂದು ಹೇಳಿದ್ದರು. ಆಗ ಆರೋಪಿತ ಶಿರಸಿ-ಹಾನಗಲ್‌ ರಸ್ತೆಯ ಮಳಗಾಂವ ಬಸ್‌ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದರು.

ಆ.4 ರಂದು ಬೆಳಗ್ಗೆ 11:45ಕ್ಕೆ ಆರೋಪಿತರು ತಿಳಿಸಿದ ಜಾಗಕ್ಕೆ ಬಂದಾಗ ಬಂಗಾರ ನೀಡುವುದಾಗಿ ನಂಬಿಸಿ ಸಚಿನ್‌ ಜತೆ ಬಂದ ಮಲಪುರಂದ ವಿಷ್ಣು, ನಾರಾಯಣ ಇಬ್ಬರೂ ಆರೋಪಿತರ ಬಳಿ ಹೋದಾಗ ದಾಳಿ ನಡೆಸಿ ಹೊಡೆದು ಇದ್ದ 9. 11 ಲಕ್ಷ ರೂ. ತೆಗೆದುಕೊಂಡು ಪರಾರಿಯಾಗಿದ್ದರು.

ಹೆಡೆಮುರಿ ಕಟ್ಟಿದ ಪೊಲೀಸರು: ಪ್ರಕರಣ ದಾಖಲಿಸಿಕೊಂಡ ಶಿರಸಿ ಪೊಲೀಸರು ಮೂರು ತಂಡಗಳನ್ನಾಗಿ ರಚಿಸಿ ಇದೀಗ ಎಂಟು ಜನರಲ್ಲಿ ಐವರನ್ನು ಬಂಧಿಸಿದ್ದಾರೆ.

Advertisement

ಸೊರಬ ಆನವಟ್ಟಿಯ ನಾಗಪ್ಪ ಕೊರಚರ (71), ಅವಿನಾಧ ಕೊರಚರ (28), ನಿಸ್ಸಾರ ಅಹಮದ್‌ (26), ಸಂಜೀವ ಕೊರಚರ (27), ಕೃಷ್ಣಪ್ಪ ನಾಯ್ಕ ಶಿಕಾರಿಪುರ 42 ಅವರನ್ನು ಬಂಧಿಸಲಾಗಿದೆ.

ಹೆಚ್ಚುವರಿ ಎಸ್‌ಪಿ ಸಿ.ಟಿ. ಜಯಕುಮಾರ, ಎಂ.ಜಗದೀಶ ಮಾರ್ಗದರ್ಶನದಲ್ಲಿ ಕೆ.ಎಲ್‌. ಗಣೇಶ, ಸಿಪಿಐ ಶಶಿಕಾಂತ ವರ್ಮಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರು, ಸುನೀಲಕುಮಾರ, ಮಹಾಂತಪ್ಪ ಕುಂಬಾರ, ಸಿಬಂದಿ ಪಾಲ್ಗೊಂಡಿದ್ದರು.

ಸಿಎಂ ಬಂಗಾರ ಪದಕಕ್ಕೆ ಶಿಫಾರಸ್ಸು: ಈ ಪ್ರಕರಣದಲ್ಲಿ ರಾಮಯ್ಯ ಪೂಜಾರಿ ಕಾರ್ಯ ಕೂಡ ಗಮನಾರ್ಹ ಎಂದು ಎಸ್ಪಿ ಬಣ್ಣಿಸಿದರು. ರಾಮಯ್ಯ ಅವರ ಕಾರ್ಯ ಮೆಚ್ಚಿ ಸಿಎಂ ಬಂಗಾರದ ಪದಕಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದೂ ಹೇಳಿದರು.

ಹೆಚ್ಚುವರಿ ಎಸ್ಪಿ ಎಂ.ಜಗದೀಶ, ಡಿಎಸ್‌ ಪಿ ಗಣೇಶ ಕೆ.ಎಲ್‌.,ಸಿಪಿಐ ಶಶಿಕಾಂತ ವರ್ಮಾ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next