Advertisement
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಾವು ಇಳುವರಿ ತೀರಾ ಕುಠಿತವಾಗಿದೆ. ವಾತಾವರಣದಲ್ಲಿನ ವೈಪರೀತ್ಯದಿಂದ ಮಾವಿನ ಮರಗಳು ಹೂ ಬಿಟ್ಟಿಲ್ಲ. ಮಿಡಿಯಷ್ಟೇ ಅಲ್ಲ ಮಾರುಕಟ್ಟೆಗಳಲ್ಲಿ ಹೊರ ರಾಜ್ಯದ ಮಾವುಗಳಿಗೆ ಈಗ ಬೇಡಿಕೆಯಿದೆ. ಸ್ಥಳೀಯ ಮಾವಿನ ಮಿಡಿಗಳು ಇಷ್ಟರಲ್ಲೇ ಅಧಿಕ ದರಕ್ಕೆ ಮಾರಾಟವಾಗಿವೆ. ಆದರೂ ಜನ ಮಿಡಿಗಾಗಿ ಹುಡುಕಾಡುತ್ತಿದ್ದಾರೆ. ಬೇಡಿಕೆಯ ಮಾವಿನ ಕಾಯಿಗಳು ಸಿಗದೇ ಮಾವು ಪ್ರಿಯರಿಗೆ ನಿರಾಶೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಮಾವಿನ ಕಾಯಿ ಭರ್ಜರಿ ಬೇಡಿಕೆಯಿಂದ ಅತ್ಯಧಿಕ ದರಗಳಿಗೆ ಮಾರಾಟವಾಗುತ್ತಿದೆ. ಕಾಟು ಮಾವಿನ ಮಿಡಿಗಳು ಒಂದಕ್ಕೆ 4ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದೆ. ಗ್ರಾಮೀಣ ಹಳ್ಳಿ ಪ್ರದೇಶದಲ್ಲಿ 500 ಮಾವಿನ ಮಿಡಿಗಳಿಗೆ 1,500ರಿಂದ 2,000 ರೂ. ತನಕದ ದರಕ್ಕೆ ಮಾರಾಟವಾದರೆ ಪಟ್ಟಣ, ನಗರ ಪ್ರದೇಶದಲ್ಲಿ ಸುಮಾರು 2 ಸಾವಿರದಿಂದ 2,500 ಸಾವಿರ ರೂ.ಗೆ ಮಾರಾಟವಾಗುತ್ತದೆ. ಹೆಚ್ಚು ಕ್ರಯ ನೀಡಿ ಖರೀದಿಸಲು ಖರೀದಿಗಾರರು ಎಷ್ಟೇ ಹಣ ಪಾವತಿಸಿ ಖರೀದಿಸಲು ಸಿದ್ಧರಿದ್ದರೂ ಮಿಡಿ ಸಿಗುತಿಲ್ಲ. ಪ್ರತಿ ವರ್ಷ ಮಾವಿನ ಮರಗಳಲ್ಲಿ ಹೂ ಬಿಟ್ಟು, ಮಿಡಿ ಕಟ್ಟುವ ಆರಂಭದ ಹೊತ್ತಲ್ಲಿ ಮಾವಿನ ಕಾಯಿಯನ್ನು ಕೀಳಿ ತಂದು ಸಂಗ್ರಹಿಸಿ ಉಪ್ಪಿನಕಾಯಿಯನ್ನು ತಯಾರಿಸುವ ಮಂದಿ ಈ ಬಾರಿ ಬೇಡಿಕೆಯ ಮಾವಿನ ಮಿಡಿಗಳು ಸಿಗದೆ ನಿರಾಸೆಗೊಂಡಿದ್ದಾರೆ. ಇದರಿಂದಾಗಿ ಕಾಟು ಮಾವಿನಕಾಯಿಗೆ ಮೊರೆ ಹೋಗಿದ್ದಾರೆ.
Related Articles
Advertisement
ಹಣ್ಣುಗಳಿಗೂ ಹೆಚ್ಚಿದ ಬೇಡಿಕೆನಗರದ ಮಾರುಕಟ್ಟೆಯಲ್ಲಿ ರತ್ನಗಿರಿ, ರಸಪುರಿ, ಬೆನೆಟಾ ಅಪೂಸ್, ಬಾದಾಮಿ, ಮಲ್ಲಿಕಾ, ತೋತಾಪುರಿ, ಸಿಂಡುಲಾ, ಬೇನಿಶಾ, ಮುಂಡಪ್ಪ, ನೀಲಂ ಮೊದಲಾದ ಹಣ್ಣುಗಳು ಮಾರಾಟವಾಗುತ್ತಿದೆ. ಪ್ರಸ್ತುತ ಹಾಸನ, ಮಹಾರಾಷ್ಟ್ರ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಶ್ರೀನಿವಾಸ್‌ಪುರ, ಚಿಂತಾಮಣಿ, ಆಂಧ್ರಪ್ರದೇಶ, ಭಾಗದಿಂದ ಮಾವಿನ ಹಣ್ಣು ಉಡುಪಿ ಹಾಗೂ ದ.ಕ. ಜಿಲ್ಲೆಗಳ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಕಾರಣವೇನು?
ವಾತಾವರಣದಲ್ಲಿ ವಿಪರೀತ ಬದ ಲಾವಣೆ, ಇನ್ನೊಂದೆಡೇ ತಾಪಮಾನದಲ್ಲಿ ಏರಿಕೆ. ಮರದಲ್ಲಿ ಬಿಟ್ಟ ಹೂವುಗಳು ಸುಟ್ಟು ಹೋಗಿದೆ. ಕರಾವಳಿಯಲ್ಲಿ 40 ಡಿಗ್ರಿ ಅಧಿಕ ತಾಪಮಾನದ ತನಕ ಏರಿಕೆಯಾಗಿದ್ದು, ಇದು ಮಾವು ಬೆಳೆಗೆ ಹೊಡೆತ ನೀಡಿದೆ. ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ. ಮಾವು ಕೊರತೆಯಿಂದ ಮುಂದಿನ ದಿನಗಳಲ್ಲಿ ದರಮತ್ತಷ್ಟೂ ಏರಿಕೆಯಾಗುವ ಮುನ್ಸೂಚನೆಗಳು ದೊರಕಿವೆ. ಮರಗಳು ಪೂರ್ಣವಾಗಿ ಹೂ ಬಿಟ್ಟಿಲ್ಲ!
ವಾತಾವರಣದಲ್ಲಿ ಹವಾಮಾನದ ವೈಪರೀತ್ಯದಿಂದ ಇಳುವರಿಗೆ ಹೊಡೆತ ನೀಡಿದೆ.ಗಣನೀಯ ಪ್ರಮಾಣದಲ್ಲಿ ಇಳುವರಿ ಈ ಬಾರಿ ಕುಂಠಿತಗೊಂಡಿದೆ. ಈ ಬಾರಿ ಹಲವು ಮರಗಳು ಈವರೆಗೂ ಹೂವು ಬಿಟ್ಟಿಲ್ಲ
-ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ – ಬಾಲಕೃಷ್ಣ ಭೀಮಗುಳಿ