Advertisement

ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ

11:29 PM Apr 20, 2022 | Team Udayavani |

ಹಳೆಯಂಗಡಿ : ಸುಮಾರು 800 ವರ್ಷಗಳ ಇತಿಹಾಸ ಇರುವ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಳೇ ಗರ್ಭಗುಡಿಯ ತೆರವು ಸಂದರ್ಭದಲ್ಲಿ. ದೇವರ ಗರ್ಭಗುಡಿಯ ಪಾಣಿ ಪೀಠದ ಕೆಳ ಭಾಗದಲ್ಲಿ ಸಿಕ್ಕ ಸಣ್ಣ ಪೆಟ್ಟಿಗೆಯಲ್ಲಿ ಬಂಗಾರದ ಜೋಡಿ ಮಯೂರ ವಾಹನ ಕಂಡು ಬಂದಿದೆ.

Advertisement

ನೂತನ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹಾಗೂ ಸುತ್ತು ಪೌಳಿಗಾಗಿ ಕಳೆದ ಹದಿನೈದು ದಿನಗಳಿಂದ ಹಳೇ ದೇವಳವನ್ನು ತೆರವು ಮಾಡುವ ಕಾರ್ಯವನ್ನು ಭಕ್ತರು ಕರ ಸೇವೆಯ ಮೂಲಕ ನಡೆಸುತ್ತಿದ್ದಾರೆ.

ಸದ್ಯ ಮಯೂರ ವಾಹನದ ಜೋಡಿಯನ್ನು ಸುರಕ್ಷಿತವಾಗಿ ಕಚೇರಿಯಲ್ಲಿ ಇಡಲಾಗಿದೆ.

ಇದನ್ನೂ ಓದಿ : ಎಲ್ಲೂರು ವಿಶ್ವೇಶ್ವರ ದೇಗುಲದ ಉತ್ಸವದಂದು ಪಲ್ಲಕ್ಕಿಗೆ ಬಳಸಿದ‌ ಮಲ್ಲಿಗೆಯೆಷ್ಟು ಗೊತ್ತಾ?

Advertisement

Udayavani is now on Telegram. Click here to join our channel and stay updated with the latest news.

Next