Advertisement

ಬೆಂಗ್ಳೂರಲ್ಲಿ ಉಳಿದುಕೊಂಡಿದ್ದ ಗೋಡ್ಸೆ

06:34 AM Jan 31, 2019 | Team Udayavani |

ಬೆಂಗಳೂರು: ಗಾಂಧಿ ಹಂತಕ ಗೋಡ್ಸೆ, ಗಾಂಧಿಯನ್ನು ಹತ್ಯೆಗೈಯುವ 15 ದಿನಗಳ ಮೊದಲು ಬೆಂಗಳೂರಿಗೆ ಬಂದಾಗ ಆರ್‌ಎಸ್‌ಎಸ್‌ ಸಂಘಟಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌. ದೊರೆಸ್ವಾಮಿ ದೂರಿದ್ದಾರೆ.

Advertisement

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬುಧವಾರ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ‘ಬಾ-ಬಾಪು 150ನೇ ಜನ್ಮ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಡ್ಸೆ ನಮ್ಮವನಲ್ಲ ಎಂದು ಸಂಘ ಪರಿವಾರ ಹೇಳುತ್ತಿದೆ ಎಂದು ಟೀಕಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಂ.ನಾಗೇಂದ್ರಸ್ವಾಮಿ ಮಾತನಾಡಿ, ಶಾಂತಿಯುತ ಹೋರಾಟಗಳ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ವಿಶ್ವ ಮಟ್ಟದಲ್ಲಿ ಮನೆಮಾತಾಗಿದ್ದಾರೆ. ಇಂತಹ ವ್ಯಕ್ತಿಯ ತತ್ವ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು.ಅದುವೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹತ್ಯೆ ಇಂದಿಗೂ ನೋವುಂಟು ಮಾಡುತ್ತಿದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿದು,್ದ ಇದನ್ನು ನಾವು ಖಂಡಿಸಬೇಕು ಎಂದು ಹೇಳಿದರು.

ಇದೇ ವೇಳೆ ಗಾಂಧಿಚಿಂತಕ ವೇಮಗಲ್‌ ಸೋಮಶೇಖರ್‌ ಅವರ ‘ಮಹದೇವ ದೇಸಾಯಿ’ ಸೇರಿದಂತೆ ಎಂಟು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಗಾಂಧಿಜೀ ಕುರಿತ ಹಲವು ವಿಚಾರಗೋಷ್ಠಿಗಳು ನಡೆದವು. ಶೇಷಾದ್ರಿಪುರ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next