Advertisement
ರಥೋತ್ಸವಕಲ್ಕುಡ ದೈವಗಳ ಭಂಡಾರ ದೇವಾಲಯಕ್ಕೆ ಆಗಮಿಸಿತ್ತು. ದೇವಸ್ಥಾನದ ವತಿಯಿಂದ ದೈವವನ್ನು ಸ್ವಾಗತಿಸಲಾಯಿತು. ರಥಬೀದಿಯಲ್ಲಿ ದೈವ ದೇವರನ್ನು ಎದುರುಗೊಂಡು, ದೈವ ಮತ್ತು ದೇವರು ಮುಖಾಮುಖೀ ನಡೆಯಿತು. ರಥದಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ, ಪೂಜಾದಿ ಕಾರ್ಯಕ್ರಮಗಳು ನಡೆದವು. ಮಧ್ಯರಾತ್ರಿ 1.30ರ ಹೊತ್ತಿಗೆ ವೈಭವದ ರಥೋತ್ಸವ ಆರಂಭಗೊಂಡಿತ್ತು. ಕಲ್ಕುಡ ಮತ್ತು ಉದ್ರಾಂಡಿ ದೈವಗಳು ರಥದ ಜತೆಗೆ ಸಂಚರಿಸಿದವು. ರಥೋತ್ಸವ ಮುಖ್ಯ ರಸ್ತೆಯ ಸಮೀಪದ ದೇವರ ಕಟ್ಟೆ ಬಳಿ ತನಕ ಸಾಗಿ, ಪುನಃ ದೇವಾಲಯಕ್ಕೆ ಹಿಂತಿರುಗಿತ್ತು.
ಜ. 11ರಂದು ಬೆಳಗ್ಗೆ ಆರಾಟ ಬಾಗಿಲು ತೆರೆಯಲಾಯಿತು. ಕವಾಟೋದ್ಘಾಟನೆ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಕಾಯಿ ಸೇವೆ ಸಮರ್ಪಿಸಿದರು. ಬೆಳಗ್ಗೆ ಅರಂಬೂರು ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು. ಸಂಜೆ ಬಜಪ್ಪಿಲ ದೈವಗಳ ಭಂಡಾರ ಆಗಮನವಾಗಿ ಅನಂತರ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ನಡೆಯಿತು. ಆರಕ್ಷಕ ಠಾಣಾ ಕಟ್ಟೆ, ಗಾಂಧಿನಗರ, ಅರಣ್ಯ ಇಲಾಖೆ, ಕೇರ್ಪಳ, ತಾಲೂಕು ಕಚೇರಿ, ಪಯಸ್ವಿನಿ ನದಿ ಬಳಿಯ ಕಟ್ಟೆ ಪೂಜೆಗಳ ಬಳಿಕ ಅವಭೃತ ಸ್ನಾನ ನಡೆಯಿತು. ಬಳಿಕ ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾರೋಹಣ ನಡೆಯಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಉಳಿದ ದಿನಗಳಲ್ಲಿ ಅನ್ನಪ್ರಸಾದ ವ್ಯವಸ್ಥೆ ಇದ್ದರೂ, ಸಾಮೂಹಿಕ ಅನ್ನಪ್ರಸಾದಕ್ಕೆ ಅಪಾರ ಭಕ್ತರು ಆಗಮಿಸಿದ್ದಾರೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
Related Articles
ಡಿ. 27ರಂದು ಗೊನೆ ಮುಹೂರ್ತದೊಂದಿಗೆ ಆರಂಭಗೊಂಡ ಜಾತ್ರಾ ಸಂಭ್ರಮ ಜ. 12ರಂದು ಮುಕ್ತಾಯಗೊಳ್ಳಲಿದೆ. ಶುಕ್ರವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.
Advertisement