Advertisement

ದೇವರ ಕತೆಗಳು

03:45 AM Jul 02, 2017 | Harsha Rao |

ದೇವರು ಮತ್ತು ದುಡ್ಡು
ದೇವರು ಭೂಮಿಗೆ ಬರುವಾಗ, ಇಲ್ಲಿ ಹೆಚ್ಚು ಖರ್ಚು ಬರುವುದಿಲ್ಲ ಎಂದು ಯೋಚಿಸಿದ್ದ. ಆದರೆ ಬರುವಾಗ ತಂದಿದ್ದ ಹಣವೆಲ್ಲಾ ಖರ್ಚಾದವು.

Advertisement

ದೇವರು ಬಯಸಿದ್ದರೆ ಚಿಟಿಕೆ ಹೊಡೆಯುವುದರಲ್ಲಿ ಹಣವನ್ನು ಸೃಷ್ಟಿಸಬಹುದಿತ್ತು. ಆದರೆ ಹಾಗೆ ಮಾಡದೆ ಕೂಲಿ-ನಾಲಿ ಮಾಡಿ ಸಂಪಾದನೆ ಮಾಡಲು ಯೋಚಿಸಿದ. ಅವನಿಗೆ ಬಹು ಕಷ್ಟದಿಂದ ಒಂದು ನೌಕರಿ ಸಿಕ್ಕಿತು.
ಬೇಸಿಗೆ ದಿನಗಳು. ಎಲ್ಲಾ ಕಾರ್ಮಿಕರ ಶರೀರದಿಂದ ಬೆವರಿಳಿಯುತ್ತಿತ್ತು, ಆದರೆ ದೇವರ ಶರೀರದಿಂದ ಬೆವರಿಳಿಯುತ್ತಿರಲಿಲ್ಲ. ಈ ಬಗ್ಗೆ ಒಬ್ಬ ಶ್ರಮಿಕನ ಗಮನ ಹರಿಯಿತು. ಅವನು ಪಕ್ಕದವನಿಗೆ ಈ ಬಗ್ಗೆ ಹೇಳಿದ, ಆ ಪಕ್ಕದವನು ಇನ್ನೊಬ್ಬನಿಗೆ ಹೇಳಿದ. ಹೀಗೆ ಈ ವಿಷಯ ಎಲ್ಲಾ ಕಾರ್ಮಿಕರಿಗೂ ತಿಳಿಯಿತು.

ಇವನು ಶ್ರಮಿಕನ ವೇಷದಲ್ಲಿರುವ ದೇವರು ಎಂದು ಎಲ್ಲರಿಗೂ ತಿಳಿಯಿತು. ಅವರೆಲ್ಲಾ ಅಂದು “ದೇವರು ಯಾವ ರೂಪದಲ್ಲಿ ಭೇಟಿಯಾಗುವನೋ ತಿಳಿಯದು’ ಎಂಬ ಹಾಡನ್ನು ಕೇಳಿದ್ದರು.

ಎಲ್ಲಾ ಕಾರ್ಮಿಕರು ಬಂದು ಅವನ ಕಾಲಿಗೆರಗಿದರು. ಭಕ್ತಿಯ ವಶದಲ್ಲಿ ಮೈಮರೆತರು. ರೋದಿಸಿದರು. ಹಾಡಿದರು. ದೇವರೆದುರು ತಮ್ಮ ತಮ್ಮ ಬೇಡಿಕೆಗಳನ್ನಿಟ್ಟರು.

ದೇವರು ಚಿಂತಾಕ್ರಾಂತನಾದ, ಈಗ ಅವನ ಶರೀರದಿಂದ ಧಾರಾಕಾರವಾಗಿ ಬೆವರಿಳಿಯಿತು !

Advertisement

ದೇವರು ಮತ್ತು ಫೈಲು
ಒಂದು ಕಚೇರಿಯ ವರಾಂಡದಲ್ಲಿ ಇಬ್ಬರು ಹರಟುತ್ತಿದ್ದರು. ಒಬ್ಬ ಹೇಳಿದ, “”ದೇವರ ಅನುಗ್ರಹವಿಲ್ಲದೆ ಒಂದು ಎಲೆಯೂ ಅತ್ತ-ಇತ್ತ ಸರಿಯುವುದಿಲ್ಲ”
ದೇವರು ಅವರನ್ನು ತಡೆದು ಹೇಳಿದ, “”ನೀವಿಬ್ಬರು ಇದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀರ ಅಂತ ಅನ್ನಿಸುತ್ತದೆ”.
“”ಹೌದು, ನೀವು ಹೇಳ್ಳೋದು ಸರಿ” ಎಂದ ಒಬ್ಬ.

ಆಗಲೇ ದೇವರು ಹೇಳಿದ, “””ದೇವರ ಅನುಗ್ರಹ, ಮರ್ಜಿ ಇಲ್ಲದೆ ಫೈಲ್‌ಗ‌ಳು ಖಂಡಿತ ಅತ್ತ ಇತ್ತ ಆಗುತ್ತವೆ”.
“”ಇದಕ್ಕೇನು ಸಾಕ್ಷಿ?” ಇಬ್ಬರೂ ಪ್ರಶ್ನಿಸಿದರು.

“”ಇದಕ್ಕೆ ನಾನೇ ದೇವರು ಎಂಬುದೇ ಸಾಕ್ಷಿ” ಹೀಗೆಂದು ದೇವರು ಅದೃಶ್ಯನಾದ.
ಆಗ ಒಬ್ಬ ಮತ್ತೂಬ್ಬನಿಗೆ ಹೇಳಿದ, “”ಅಂದರೆ ದೇವರಿಗೂ ಈ ಸತ್ಯದ ಅರಿವಿದೆ”
ಅಲ್ಲಿಯೇ  ಬೀಡಿ ಸೇದುತ್ತಿದ್ದ ಮೂರನೆಯವರು ಅವನ ಮಾತನ್ನು ತಡೆದು ಹೇಳಿದ, “”ಮನುಷ್ಯನಿಗೂ ಈ ಸತ್ಯದ ಅರಿವಿದೆ”

“”ಇಲ್ಲ , ಯಾಕೆಂದರೆ ನಾನು ಅದೃಶ್ಯನಾಗಲಾರೆ” ಎಂದ ಒಬ್ಬ.

ದೇವರು ಮತ್ತು ನಾನು
ದೇವರಿಗೆ ಶ್ರೀನಗರದಲ್ಲಿ ಭೇಟಿಯಾದ ವ್ಯಕ್ತಿ ಕನ್ಯಾಕುಮಾರಿಯಲ್ಲಿಯೂ ಭೇಟಿಯಾದ. ಇಬ್ಬರೂ ಪರಸ್ಪರ ಎದುರಾದಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ ಮೂಡಿತು.
ಮನುಷ್ಯ ಕೇಳಿದ, “”ನೀವಿಲ್ಲಿ?”
ದೇವರು ಹೇಳಿದ, “”ನೀವೂ ಇಲ್ಲಿ?”
“”ಈ ಜಗತ್ತು ಗೋಲಾಕಾರದಲ್ಲಿದೆ” ಆ ಮನುಷ್ಯ ನಕ್ಕ.
ದೇವರಿಗೆ ಅವನ ಗೇಲಿ ಮಾತು ತಿಳಿಯಲಿಲ್ಲ. ಇವನಿಗೆ ಈ ರಹಸ್ಯ ಹೇಗೆ ತಿಳಿಯಿತು ಎಂದು ದೇವರು ಕಳವಳಗೊಂಡ.
“”ಈ ಜಗತ್ತು ಗೋಲಾಕಾರವಾಗಿದೆ ಎಂದು ನಿಮಗೆ ಹೇಗೆ ತಿಳಿಯಿತು?” ದೇವರು ಆ ಮನುಷ್ಯನನ್ನು ಕೇಳಿದ.
“”ಯಾಕೆ, ನೀವು ಕಲಿತವರಲ್ಲವೇ?” ದೇವರಿಗೆ ಅವನು ಗೆಲಿಲಿಯೋನ ನೋವಿನ ಕಥೆಯನ್ನು ಹೇಳಿದ; ಅದಕ್ಕೆ ಸಾಕ್ಷಿ ರೂಪದಲ್ಲಿ ಅಂತರಿಕ್ಷದಿಂದ ತೆಗೆದ ಭೂಮಿಯ ಕೆಲವು ಚಿತ್ರಗಳನ್ನೂ ತೋರಿಸಲು ತೆಗೆದುಕೊಂಡು ಹೋದ.
ಅಂದು ರಾತ್ರಿ ದೇವರು ತುಂಬಾ ಚಿಂತಿತನಾಗಿದ್ದ. ಅವನಿಗೆ ತನ್ನ ಅಸ್ತಿತ್ವ ಅಪಾಯದಲ್ಲಿದೆ ಎಂದು ಅನ್ನಿಸಿತು. ಆದರೆ, ಬೆಳ್ಳಂಬೆಳಿಗ್ಗೆ ಈ ಭಜನೆ ಕೇಳಿದಾಗ ಅವನ ಮನಸ್ಸಿಗೆ ಸಮಾಧಾನವಾಯಿತು:

“ನೀನೇ ರಕ್ಷಕ, ನೀನೇ ಆಧಾರ, ನೀನೇ ಜಗ-ರೂಪಿ ದೋಣಿಯ ನಾವಿಕ, ನಿನ್ನನ್ನು ಮರೆತು ಮನುಷ್ಯ ಜಗತ್ತೆಂಬ ಅಂಧಕಾರದಲ್ಲಿ ಅಲೆಯುತ್ತಿದ್ದಾನೆ…’

ದೇವರು ಮತ್ತು ವೃದ್ಧ
ದೇವರು ದಲಿತರ ಸಮಸ್ಯೆಗಳನ್ನು ತಿಳಿಯಲು ಅವರ ಮನೆಗಳಿರುವ ಗಲ್ಲಿಗೆ ಹೋದ. ಅಲ್ಲಿ ಒಬ್ಬ ವೃದ್ಧ ಅವನನ್ನು ಗೇಲಿ ಮಾಡುತ್ತ ಸ್ವಾಗತಿಸಿದ, “”ಬನ್ನಿ ಬನ್ನಿ , ಓಡಿ ಬನ್ನಿ , ಹಾರ ತನ್ನಿ , ಚುನಾವಣೆ ಬಂದಿದೆ, ಮುಖಂಡರು ವೋಟು ಕೇಳಲು ಬಂದಿದ್ದಾರೆ”

ನಂತರ ವೃದ್ಧನೊಂದಿಗೆ ಅನೇಕ ಜನರೂ ಅವನನ್ನು ಗೇಲಿ ಮಾಡಿದರು.
“”ನನಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ನಾನು ಬಂದಿರುವುದು…”
“”ಓಹ್‌, ನಾವು ಇವರನ್ನು ತಪ್ಪಾಗಿ ತಿಳಿದೆವು, ಇವರು ಗಾಂಧೀಜಿ. ಇವರು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ” ವೃದ್ಧ ಮತ್ತೆ ಗೇಲಿ ಮಾಡಿ ನಕ್ಕ, ಅವನೊಂದಿಗೆ ಉಳಿದವರೂ ನಕ್ಕರು.
ಅಂದು ದೇವರು ನಿರಾಸೆಯಿಂದ ಹೊರಟು ಹೋದ. ಆದರೆ, ಮರುದಿನ ತನ್ನ ಚೇಲಾಗಳೊಂದಿಗೆ ಒಂದು ತೆರೆದ ಜೀಪ್‌ನಲ್ಲಿ ಬಂದು ದಲಿತರಿಗೆ ಕಪ್ಪು ಬಾವುಟ ತೋರಿಸಿ ಹೊರಟು ಹೋದ.

ದೇವರು ಮತ್ತು ಕ್ರಿಕೆಟ್‌
ಒಂದು ದಿನ ಸಂಜೆ ದೇವರು ಅಡ್ಡಾಡುತ್ತಿದ್ದ. ಮಾರ್ಗದಲ್ಲಿ ಆರೇಳು ವರ್ಷದ ಕೆಲವು ಬಾಲಕರು ಕ್ರಿಕೆಟ್‌ ಆಡುತ್ತಿರುವುದನ್ನು ದೇವರು ನೋಡಿದ. ಅವನು ಅಲ್ಲಿಯೇ ನಿಂತು ಅವರ ಆಟವನ್ನು ನೋಡಲಾರಂಭಿಸಿದ.
ಸ್ವಲ್ಪ ಸಮಯದ ನಂತರ ಬಾಲ್‌ ಗುರಿತಪ್ಪಿ ಅವನೆಡೆಗೇ ತೂರಿ ಬಂತು. ದೇವರು ಕೂಡಲೇ ಪಕ್ಕಕ್ಕೆ ಸರಿದು ತಪ್ಪಿಸಿಕೊಂಡ. ಬಾಲ್‌ ಕೂದಲೆಳೆಯ ಅಂತರದಲ್ಲಿ ಹಾದು ಮುಂದಕ್ಕೆ ಹೋಯಿತು.
“”ಸಾರಿ ಅಂಕಲ್‌” ಎಂದ ಒಬ್ಬ ಬಾಲಕ.
ಆ ಬಾಲಕ ಕ್ಷಮೆ ಯಾಚಿಸಿದ್ದು ದೇವರಿಗೆ ಹಿತವೆನಿಸಿತು. ಅವನು ಮನಸ್ಸಿನಲ್ಲಿಯೇ ಕ್ರಿಕೆಟ್‌ ಜನಪ್ರಿಯವಾಗಲಿ ಎಂದು ಹರಸಿದ. ಅಂದಿನಿಂದ ಕ್ರಿಕೆಟ್‌ ಜನಪ್ರಿಯವಾಗಿದೆ ಹಾಗೂ ದೂರದರ್ಶನದಲ್ಲಿ ಹಗಲು-ರಾತ್ರಿ ಅದನ್ನು ತೋರಿಸಲಾಗುತ್ತಿದೆ.

ದೇವರು ಮತ್ತು ಭಿಕ್ಷುಕ 
ದೇವರು ಯಾರಿಗೇ ಆದರೂ ಒಳಿತನ್ನು ಮಾಡುವುದಕ್ಕೆ ಹಿಂಜರಿಯುತ್ತಿರಲಿಲ್ಲ. ಒಂದು ದಿನ ಅವನು ಮನುಷ್ಯನ ವೇಷದಲ್ಲಿ ಸಂತೆಗೆ ಹೋದ. ಅಲ್ಲಿ ಅವನಿಗೆ ಭಿಕ್ಷುಕನೊಬ್ಬ ಭೇಟಿಯಾದ.
ಭಿಕ್ಷುಕ ಅವನಲ್ಲಿ ಭಿಕ್ಷೆ ಯಾಚಿಸಿದ. ದೇವರು ಜೇಬಿಗೆ ಕೈಹಾಕಿದಾಗ, ಅಲ್ಲಿ ಎಂಟಾಣೆ ಅಥವಾ ಒಂದು ರೂಪಾಯಿ ಇರದೆ ಕೇವಲ ನೋಟುಗಳಿದ್ದವು.

ದೇವರು ಭಿಕ್ಷುಕನಿಗೆ ಹೇಳಿದ, “”ನೋಡಪ್ಪ, ಚಿಲ್ಲರೆ ಇಲ್ಲ”
ಭಿಕ್ಷುಕ ದುಷ್ಟನಾಗಿದ್ದ. ಅವನು ದೇವರಲ್ಲಿ ಯಾಚಿಸಿದ, “”ಒಂದು 

– ಮೂಲ: ವಿಷ್ಣು ನಾಗರ್‌
– ಅನು.: ಡಿ. ಎನ್‌. ಶ್ರೀನಾಥ್‌

Advertisement

Udayavani is now on Telegram. Click here to join our channel and stay updated with the latest news.

Next