Advertisement

ನವರಾತ್ರಿ :ಇಂದಿನ ಆರಾಧನೆ- ಭಕ್ತಿಗೆ ಒಲಿಯುವ ದೇವಿ “ಕೂಷ್ಮಾಂಡಾ”

12:51 AM Oct 18, 2023 | Team Udayavani |

ಕೂಷ್ಮಾ ಎಂದರೆ ಕುಂಬಳಕಾಯಿ. ಕುಂಬಳಕಾಯಿ ಈಕೆಗೆ ಪ್ರಿಯವಾದುದು. ಅಂಡ ಎಂದರೆ ಬ್ರಹ್ಮಾಂಡ. ಈಕೆಯ ನಗುವಿನಿಂದ ಬ್ರಹ್ಮಾಂಡದ ಸೃಷ್ಟಿಯಾಯಿತು ಎಂದು ಪುರಾಣಗಳು ನಮಗೆ ತಿಳಿಸುತ್ತವೆ. ಆದ್ದರಿಂದ ಆದಿಶಕ್ತಿಯ ಈ ಸ್ವರೂಪವನ್ನು ಕೂಷ್ಮಾಂಡಾ ಎಂಬ ಹೆಸರಿನಿಂದ ಕರೆಯುತ್ತಾರೆ.

Advertisement

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

“ಕಮಂಡಲು, ಕಮಲ, ಬಿಲ್ಲು-ಬಾಣ, ಅಮೃತ ಕಲಶ, ಜಪಮಾಲೆ, ಗದೆಯನ್ನು ಈಕೆಯು ಕೈಗಳಲ್ಲಿ ಧರಿಸಿದ್ದಾಳೆ. ಇವಳು ಎಂಟು ಕೈಗಳನ್ನು ಉಳ್ಳವಳಾದ್ದರಿಂದ ಇವಳನ್ನು ಅಷ್ಟಭುಜಾದೇವಿ ಎಂದೂ ಕರೆಯುತ್ತಾರೆ.’

ಕೂಷ್ಮಾಂಡಾದೇವಿ ಸೂರ್ಯಲೋಕದಲ್ಲಿ ನೆಲೆಸಿರುವಳು. ಈಕೆಯ ಸ್ವರ್ಣಮಯ ಕಾಂತಿ ಸೂರ್ಯನಿಗಿಂತಲೂ ಹೆಚ್ಚಾಗಿ ಪ್ರಜ್ವಲಿಸುತ್ತದೆ. ಈಕೆಯ ತೇಜಸ್ಸಿನಿಂದಲೇ, ಸಮಸ್ತ ಲೋಕಗಳೂ ಪ್ರಕಾಶಗೊಳ್ಳುತ್ತಿವೆ. ಈ ದೇವಿಯನ್ನು ಪೂಜಿಸುವುದರಿಂದ ವ್ಯಾಧಿಗಳಿಂದ ಮುಕ್ತರಾಗ ಬಹುದು. ಸುಖ-ಸಮೃದ್ಧಿಯನ್ನು ಪಡೆಯಬಹುದು. ಸಾಧಕನು ಚತುರ್ಥಿಯಂದು ಶ್ರದ್ಧಾ-ಭಕ್ತಿಗಳಿಂದ ಈಕೆಯನ್ನು ಆರಾಧಿಸಿದಾಗ, ಅವನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸುತ್ತದೆ. ಈಕೆಯು ಬಹಳ ಬೇಗ ಭಕ್ತಿಗೆ ಪ್ರಸನ್ನಳಾಗುತ್ತಾಳೆ ಎಂಬುದು ವಿಶೇಷ.

 ಸ್ವಾಮಿ ಶಾಂತಿವ್ರತಾನಂದಜೀ , ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next