Advertisement
ಒಬ್ಬನಿಗೆ ದೇವರು ಎಲ್ಲಿದ್ದಾನೆ? ಎಂಬ ಪ್ರಶ್ನೆ ಬಹುವಾಗಿ ಕಾಡಿತಂತೆ. ಕಂಡಕಂಡವರಲ್ಲಿ ಕೇಳುತ್ತ ಹೋದನಂತೆ. ಎಲ್ಲರೂ ಅವರವರ ತಿಳುವಳಿಕೆಗೆ ತಕ್ಕಂತೆ ಉತ್ತರವನ್ನು ಕೊಟ್ಟರು. ಆದರೆ ಆತನಿಗೆ ಆ ಉತ್ತರದಿಂದ ತೃಪ್ತಿಯಾಗಲೇ ಇಲ್ಲ. ಇನ್ನೂ ಉತ್ತರವನ್ನು ಹುಡುಕುತ್ತಲೇ ಹೋದ. ದೇವಾಲಯಗಳಲ್ಲೂ ಆತನಿಗೆ ದೇವರು ಕಾಣಸಿಗಲೇ ಇಲ್ಲ. ಇಲ್ಲ, ಎಲ್ಲೂ ದೇವರಿಲ್ಲ ಎಂದು ಕೊಳ್ಳುತ್ತಿರುವಾಗಲೇ ಸಂತನ ರೂಪದಲ್ಲಿದ್ದ ತೀರಾ ಮುದುಕನೊಬ್ಬ ಎದುರಾದ.
ಮಾಯವಾಗಲು ದೇವರಿಗೇನಾಗಿದೆ. ನನಗೆ ಇವತ್ತು ದೇವರೆಲ್ಲಿರುವನೆಂದು ನೀವು ತೋರಿಸಲೇ ಬೇಕು ಎಂದು ಜೋರು ಮಾಡಿದ. ಆ ಸಂತ, ಗಾಬರಿಯಾಗುವುದು ಬೇಡ. ಅನುಮಾನವೂ ಬೇಡ. ನಿಮಗೆ ಖಂಡಿತವಾಗಿಯೂ ದೇವರನ್ನು ತೋರಿಸುತ್ತೇನೆ ಎನ್ನುತ್ತ ಮುಂದೆ ನಡೆದ. ಮುಂದೆ ಹೋಗುತ್ತಿದ್ದಂತೆ ವಿಷದ ಹಾವೊಂದು ಆ ಸಂತನನ್ನು ಕಚ್ಚಲು ಮುಂದಾಯಿತು. ಕೂಡಲೆ ಅದನ್ನು ಹಿಡಿದು ದೂರ ಬಿಸಾಡಿಬಿಟ್ಟ.
Related Articles
Advertisement
“ದೇವರೆ ನಿನ್ನಲ್ಲಿಯೇ ಇದ್ದಾನೆ’“ಅಂದರೆ!?’
“ವಿಷದ ಹಾವಿನಿಂದ ನನ್ನನ್ನು ರಕ್ಷಿಸಿದೆಯಲ್ಲ; ಆ ಕ್ಷಣ ನೀನು ದೇವರಾಗಿ¨ªೆ’
“ಅದು ನಾನು ಮಾಡಬೇಕಾದ ಕರ್ತವ್ಯವಾಗಿತ್ತು. ನಿಮ್ಮನ್ನು ಕಾಪಾಡಿದೆ ಅಷ್ಟೆ. ಅದರಲ್ಲಿ ದೇವರು ಹೇಗೆ ಕಂಡ?’
ಎಂದ ಈತ ನಗುತ್ತ.
“ನಿನ್ನಲ್ಲಿದ್ದ ದೇವರೇ ನನ್ನನ್ನು ಕಾಪಾಡಿದ್ದು’
“ನೀವು ನನ್ನ ಪ್ರಶ್ನೆಯ ಹಾದಿ ತಪ್ಪಿಸುತ್ತಿದ್ದೀರಿ ಅಷ್ಟೆ. ನನ್ನ ಮನಸ್ಸು ನಿಮ್ಮನ್ನು ಕಾಪಾಡು ಎಂದಿತು. ಆ ಕ್ಷಣಕ್ಕೆ ನಾನು
ಆ ಹಾವನ್ನು ಹಿಡಿದು ಎಸೆದೆ. ಅದರಲ್ಲಿ ದೇವರ ಪಾತ್ರವೇನಿದೆ?’
“ನಿನ್ನ ಮನಸ್ಸು ಹೇಳಿತು, ಸರಿ. ಅದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಆ ಮನಸ್ಸು ಹಾಗೆ ಹೇಳುವಂತೆ ಮಾಡಿದ್ದಾದರೂ ಯಾವುದು?’
“ಇಲ್ಲ, ಈ ತರ್ಕವನ್ನು ನಾನು ಒಪ್ಪುವುದಿಲ್ಲ’
“ಸರಿ. ಹಾಗಾದರೆ ನೀನು ಆ ಹಾವನ್ನು ಹಿಡಿದ ಕ್ಷಣ ಅದು ನಿನ್ನನ್ನೇ ನಿನ್ನನ್ನು ಕಚ್ಚಬಹುದೆಂಬ ಯೋಚನೆ ನಿನಗೇಕೆ ಬರಲಿಲ್ಲ?
ನಿನ್ನ ಮನಸ್ಸಿಗೆ ತಿಳಿಯಲಿಲ್ಲವೇ?’
ಈಗ ಈತನಿಗೆ ಸಂತನ ಮಾತು ಅರ್ಥವಾಯಿತು. ನೋಡು, ದೇವರು ಎÇÉೆಲ್ಲಿಯೂ ಇ¨ªಾನೆ. ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಇದ್ದಾನೆ. ನಿನಗೆ ನನ್ನನ್ನು ಕಾಪಾಡುವ ಮನಸ್ಸು ಮತ್ತು ಶಕ್ತಿಯನ್ನು ಕೊಟ್ಟಿದ್ದೇ
ಆ ದೇವರು. ಹಾಗಾಗಿ ನಾವು ದೇವರನ್ನು ಪೂಜಿಸಬೇಕು. ಈ ಪೂಜೆಗೆ ದೇವರಮೂರ್ತಿ ಒಂದು ಸಂಕೇತ. ಅದು, ಕಣ್ಣಿಗೆ ಕಾಣುವ ಆಕಾರ. ಆದರೆ ಪೂಜೆ ಎಂಬುದು ಮನಸ್ಸನ್ನು ಕಲ್ಮಶಗಳಿಲ್ಲದೆ ಶುದ್ಧವಾಗಿಡುವ ಒಂದು ಸರಳವಿಧಾನ. ಹಾಗಾಗಿ ಮನಸ್ಸು ಶುದ್ಧವಾದಂತೆ ಎಲ್ಲರಲ್ಲಿಯೂ ದೈವತ್ವ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಜಗತ್ತು ಆನಂದಮಯ ಬದುಕು ಸಾಧ್ಯವಾಗುತ್ತದೆ ಎಂದ. ದೇವರೆಲ್ಲಿದ್ದಾನೆ? ಅವನನ್ನು ಪ್ರತ್ಯಕ್ಷ ನೋಡುವುದು ಹೇಗೆ ಎಂದು ಕೇಳಿದ್ದವನ ಪ್ರಶ್ನೆಗೆ ಉತ್ತರಸಿಕ್ಕಿತು. ಆ ಸಂತನೇ ದೇವರಂತೆ ಕಂಡ. ಈತ ತಕ್ಷಣವೇ ಕರಜೋಡಿಸಿ ನಮಸ್ಕರಿಸಿದ. ಈತನಿಗೆ ಆಶೀರ್ವದಿಸಿ ಸಂತ ಹೊರಟುಹೋದ. ದೇವರು ನಮ್ಮಲ್ಲಿಯೇ ಇದ್ದಾನೆ ಎಂಬದು ಸತ್ಯವಾದ ಮಾತು. ಅದಕ್ಕೆ ತಕ್ಕಂತೆ ನಮ್ಮ ನಡೆನುಡಿಗಳನ್ನು ರೂಢಿಸಿಕೊಂಡಾಗ ಸದ್‌ಜ್ಯೋತಿಯಿಂದ ಜಗತ್ತು ಬೆಳಗುವುದರಲ್ಲಿ ಸಂಶಯವಿಲ್ಲ.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳವಾಗಿ ಜೀವಿಸಿ|| ವಿಷ್ಣು ಭಟ್ಟ ಹೊಸ್ಮನೆ