ನಿನಗೇನಪ್ಪಾ, ಇನ್ಮೆಲೆ ವರ್ಕ್ ಫ್ರಂ ಹೋಮ್. ಮತ್ತೆ ಆರಾಮಾಯ್ತಲ್ಲ… ಬೇಕೆನಿಸಿದಾಗ ಊಟ, ತಿಂಡಿ, ನಿದ್ದೆ ಮಾಡಬಹುದು! ಇಂಥ ಸೌಭಾಗ್ಯ ಯಾರಿಗುಂಟು, ಯಾರಿಗಿಲ್ಲ ಅಂತ ಗೆಳೆಯರು ಕಿಚಾಯಿಸಿದ್ದು ಉಂಟು. ನಿಜ ಹೇಳಬೇಕೆಂದರೆ, ನನ್ನ ಸ್ಥಿತಿ ಹಾಗಿಲ್ಲ. ನನಗೆ ಇಬ್ಬರು ಮಕ್ಕಳು. ಹೆಂಡತಿ ಜೊತೆಗಿಲ್ಲ. ಗಾಬರಿಯಾಗಬೇಡಿ. ಆಕೆ, ತನ್ನ ತಾಯಿಗೆ ಹುಷಾರಿಲ್ಲವೆಂದು ಊರಿಗೆ ಹೋದವಳೇ, ಲಾಕ್‌ಡೌನ್‌ಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.
ಅವಳನ್ನು ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದಾಯಿತು. ಪ್ರಯೋಜನವಾಗಲಿಲ್ಲ. ಈಗ, ನಮ್ಮ ಅತ್ತೆ ಮನೆ ಇರುವ ಪಕ್ಕದ ಕ್ರಾಸ್‌ನವರೇ ಕೊರೊನಾ ಸೋಂಕಿಗೆ ತುತ್ತಾಗಿ, ಇಡೀ ಪ್ರದೇಶವೇ ಸೀಲ್‌ಡೌನ್ ಆಗಿಹೋಗಿದೆ. ಹೀಗಿರುವಾಗ ಆಕೆಯನ್ನು ಕರೆದುಕೊಂಡು ಬರುವುದು ಹೇಗೆ? ಮನೆಯಲ್ಲಿ ನಾನೀಗ ಇಬ್ಬರು ಮಕ್ಕಳ ಹೊಟ್ಟೆ- ಬಟ್ಟೆ ನೋಡಿಕೊಳ್ಳಬೇಕು. ಮನೆಗೆಲಸವನ್ನೆಲ್ಲ ಮಾಡಬೇಕು. ಇದರ ಜೊತೆಗೆ ಆಫೀಸಿನ ಕೆಲಸ.
ಸ್ವಲ್ಪ ಹೆಚ್ಚು ಕಡಿಮೆಯಾದರೂ, ಕಟ್ಟುನಿಟ್ಟಿನ ಬಾಸ್ ಎದುರು ಆಗಾಗ್ಗೆ ಕಟಕಟೆಯಲ್ಲಿ ನಿಲ್ಲುತ್ತಿರಬೇಕು. ಎಷ್ಟೋ ಸಲ, ಹೋಟೆಲ್‌ನಿಂದ ಪಾರ್ಸೆಲ್ ತಂದು, ಊಟ-ತಿಂಡಿ ಮಾಡುವ ತಲೆನೋವು ತಪ್ಪಿಸಿಕೊಳ್ಳೋಣ ಎಂದು ಯೋಚಿಸ್ತೇನೆ. ಆದರೆ, ನಮ್ಮ ಏರಿಯಾದಲ್ಲಿ ಒಳ್ಳೆಯ ಹೊಟೇಲ್‌ಗಳೂ ಇಲ್ಲ ಅರ್ಧ- ಮುಕ್ಕಾಲು ಗಂಟೆ ಬಿಟ್ಟಿರಲು, ಮಕ್ಕಳೂ ಸಿದಟಛಿರಿಲ್ಲ. ಹೀಗಿ ರು ವಾಗ, ನನ್ನ ಸ್ಥಿತಿ ಎಂಥದೆಂದು ನೀವೇ ಅಂದಾಜು ಮಾಡಿಕೊಳ್ಳಿ.
ಲ್ಯಾಪ್‌ಟಾಪ್ ಬಿಚ್ಚಿ ಕೂತರೆ ಸಾಕು; 2ನೇ ಮಗ ಹೆಗಲ ಮೇಲೆ ಬಂದು ಕೂರುತ್ತಾನೆ. ಅವನನ್ನು ಓಲೈಸುವ ಹೊತ್ತಿಗೆ, ನಮ್ಮ ಬಾಸ್ ಇನ್ನೊಂದು ಹೆಗಲ ಮೇಲೆ ಕೂತು-“ಏನ್ರೀ, ಮನೆಯಿಂದ ಕೆಲಸ ಮಾಡೋಕೇಳಿದರೂ ಹೀಗೆ ಮಾಡ್ತೀರಲ್ಲ…’ ಅಂತ ಎಗರಾಡುತ್ತಾರೆ. ಅಬ್ಟಾ, ಮಕ್ಕಳು ಮಲಗಿದ್ದಾವೆ. ಈಗಲಾದರೂ ಕೆಲಸ ಮಾಡಿ ಮುಗಿಸೋಣ ಅಂತ ತೀರ್ಮಾನ ಮಾಡುವ ಹೊತ್ತಿಗೆ, ಇಬ್ಬರೂ ಎದ್ದುಬಿಡುತ್ತಾರೆ. ನಂತರ, ಅವರನ್ನು ಸಂಭಾಳಿ ಸುವುದೇ ದೊಡ್ಡ ಕೆಲಸವಾಗುತ್ತದೆ. ಎಷ್ಟೋ ಸಲ, ಅಡುಗೆ ಕೆಲಸ ಮತ್ತು ಆಫೀಸ್ ಕೆಲಸವನ್ನು ಒಟ್ಟಿಗೇ ಮಾಡುತ್ತಿದ್ದೇನೆ.
ಅದಕ್ಕೆ 15 ನಿಮಿಷ, ಇದಕ್ಕೆ 15 ನಿಮಿಷ! ಹೀಗೆ ಟೈಮ್ ಬ್ಯಾಲೆನ್ಸ್ ಮಾಡುತ್ತೇನೆ. ಮಕ್ಕಳಿಗೆ ದಿನವೂ ಸ್ನಾನ ಮಾಡಿಸಬೇಕು. ಈ ಸಂದರ್ಭದಲ್ಲಿ ಅಕಸ್ಮಾತ್ ಶೀತವಾಗಿ, ಅವರಿಗೆ ನೆಗಡಿ-ಜ್ವರ ಬಂದುಬಿಟ್ಟರೆ ಏನು ಮಾಡು ವುದು ಎಂಬ ಯೋಚನೆಯೇ, ನನ್ನ ಟೆನ್ಶನ್ ಅನ್ನು ಹೆಚ್ಚಿಸುತ್ತದೆ. 3 ದಿನ ರಜೆ ಹಾಕಿ, ಹೇಗಾದರೂ ಮಾಡಿ ಹೆಂಡತಿ ಯನ್ನು ಕರೆದುಕೊಂಡು ಬರಬೇಕು ಅಂತ ಯೋಚಿಸ್ತಾನೇ ಇದ್ದೇನೆ. ಆದರೆ, ಬಾಸ್ ರಜೆ ಕೊಡುತ್ತಿಲ್ಲ. ಅವರು ಪಕ್ಕಾ ಪೊ›ಫೆಷನಲಿಸ್ಟ್ ಕಷ್ಟಕ್ಕೆ ಮರಗುವ ಗುಣದವರಲ್ಲ. ಹೀಗಾಗಿ, ಲಾಕ್ ಡೌನ್ ಶುರುವಾದಾಗಿನಿಂದ, ನನ್ನದೇ ದೊಡ್ಡ ಕತೆಯಾಗಿದೆ.
* ಗುರು