ಪಣಜಿ: ಗೋವಾದ ಶಿರಗಾಂವ ಶ್ರೀ ಲಯಿರಾಯಿ ದೇವಿಯ ಜಾತ್ರೋತ್ಸವದಲ್ಲಿ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಲಾಗಿದೆ. ದೇವಸ್ಥಾನ ಸಮೀತಿಯು ಈ ನಿರ್ಣಯ ತೆಗೆದುಕೊಂಡಿದೆ.
ಶ್ರೀ ಲಯಿರಾಯಿ ದೇವಿಯ ಜಾತ್ರೆ ಮೇ 12 ಭಾನುವಾರದಿಂದ ಆರಂಭಗೊಂಡಿದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಗೋವಾ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆಯೇ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಕಳೆದ ವರ್ಷದ ಜಾತ್ರೆಯಲ್ಲಿಯೂ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಲಾಗಿತ್ತು.
ಪ್ರಸಕ್ತ ಬಾರಿ ಮಾಪ್ಸಾದ ಶ್ರೀ ಬೋಡಗೇಶ್ವರ ಜಾತ್ರೆಯಲ್ಲಿಯೂ ಕೂಡ ಗೋಬಿ ಮಂಚೂರಿಯನ್ನು ಬ್ಯಾ ಮಾಡಲಾಗಿತ್ತು. ಇದೀಗ ಶ್ರೀ ಲಯಿರಾಯಿ ದೇವಿಯ ಜಾತ್ರೆಯಲ್ಲಿಯೂ ಕೂಡ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಶಿರಗಾಂವ ಜಾತ್ರೆಯನ್ನು ಗೋಬಿ ಮಂಚೂಯಿಯಿಂದ ಮುಕ್ತಗೊಳಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಶಿರಗಾಂವ ಜಾತ್ರೆಯಲ್ಲಿ ಈ ದೃಶ್ಯ ಕಂಡುಬರುತ್ತಿದೆ.
2022 ರಲ್ಲಿ ಶ್ರೀ ಲಯಿರಾಯಿ ದೇವಸ್ಥಾನ ಸಮೀತಿಯು ಈ ಜಾತ್ರೆಯನ್ನು ಗೋಬಿ ಮಂಚೂರಿ ಮುಕ್ತಗೊಳಿಸಲು ನಿರ್ಧರಿಸಿತ್ತು. ಅಂದಿನಿಂದ ಈ ಜಾತ್ರೆಯಲ್ಲಿ ಗೋಬಿ ಮಂಚೂರಿಯಿಂದ ಮುಕ್ತಗೊಳಿಸಲಾಗಿದೆ.
ಇದನ್ನೂ ಓದಿ: Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು