ಕೊರಟಗೆರೆ: ಯುಗಾದಿ ಹಬ್ಬದ ವರ್ಷದ ತೊಡಕಿಗೆ ಈಗಲೇ ಕುರಿ ಮೇಕೆಗಳನ್ನುಕೊಂಡುಕೊಳ್ಳಲು ಜನರು ಮುಂದಾಗಿದ್ದರಿಂದ, ಮಾರುಕಟ್ಟೆಗಳಲ್ಲಿ ಜನದಟ್ಟನೆ ಕಂಡು ಬಂತು.
ಮಂಗಳವಾರ ಯುಗಾದಿ ಹಬ್ಬ. ಹಬ್ಬದ ಮರುದಿನ ವರ್ಷದ ತೊಡಕು. ಮಂಗಳವಾರ ಹಬ್ಬ ಇರುವುದರಿಂದ ಅಂದು ಮೇಕೆ-ಕುರಿ ಮಾರುಕಟ್ಟೆಇರುವುದಿಲ್ಲ. ಹಾಗಾಗಿ ಜನರು ಮೊದಲೇ ಖರೀದಿಗೆ ಮುಂದಾದರು. ಹಬ್ಬದ ಮರುದಿನ ವರ್ಷ ತೊಡಕು ಭರ್ಜರಿಯಾಗಿ ನಡೆಯುತ್ತದೆ. ಬಾಡೂಟದ ಘಮಲು ಮೂಗು, ಮನಸನ್ನು ಸೆಳೆಯುತ್ತದೆ.
ಅಕ್ಕಿರಾಂಪುರ ಮೇಕೆ ಕುರಿತಂತೆ ರಾಜ್ಯದಲ್ಲಿಯೇ ಹೆಸರಾಗಿದ್ದು, ನಾನಾ ಮೂಲೆಗಳಿಂದ ವ್ಯಾಪಾರಿಗಳು ಬರುತ್ತಾರೆ. ಆದರೆ, ಕೋವಿಡ್ ಭೀತಿ ನಡುವೆಯೂ ಜನರು ಮಾಸ್ಕ್, ಪರಸ್ಪರ ಅಂತರಮರೆತು ಖರೀದಿಯಲ್ಲಿ ತೊಡಗಿದ್ದರು. ಇದನ್ನು ಪೊಲೀಸರು ಕಂಡರೂ ಅಸಹಾಯಕರಾಗಿದ್ದರು.
ಅಧಿಕಾರಿಗಳ ನಿರ್ಲಕ್ಷ್ಯ: ಜಿಲ್ಲೆ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಸಂತೆ, ಸಭೆ,ಸಮಾರಂಭ ನಡೆಸದಂತೆ ಸರ್ಕಾರ ಸೂಚಿಸಿದ್ದರೂ ಜನ ಪಾಲಿಸುತ್ತಿಲ್ಲ. “ಜನ ಮರುಳ್ಳೋ, ಜಾತ್ರೆ ಮರುಳ್ಳೋ’ ಎನ್ನುವ ರೀತಿಯಲ್ಲಿ ಎಲ್ಲರೂ ಇಲ್ಲಿ ವರ್ತಿಸಿದ್ದೂ, ತಾಲೂಕಿನಲ್ಲಿ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಒಟ್ಟಾರೆ ಕೋವಿಡ್ ಹರಡಲು ಈ ಸಂತೆಯೊಂದು ಕಾರಣವಾಗಲಿದೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಹಬ್ಬದ ಸಂದರ್ಭದಲ್ಲಿ ನಾಲ್ಕು ಕಾಸುನೋಡಬಹುದು ಎಂದು ಕುರಿ-ಮೇಕೆಗಳನ್ನುಸಾಕಿದ್ದವರೂ ಕರೆ ತಂದಿದ್ದರು. ಜಿಲ್ಲೆಯಷ್ಟೇ ಅಲ್ಲದೆನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ,ಬೆಂಗಳೂರು ಸೇರಿದಂತೆ ಇತರೆಡೆಗಳಿಂದಲೂಮೇಕೆಗಳನ್ನು ಕೊಂಡು ಕೊಳ್ಳಲು ಬರುತ್ತಾರೆ. ಇಲ್ಲಿನ ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ
ಕೋವಿಡ್ ಹಿನ್ನೆಲೆ ಸಂತೆ ನಡೆಸದಂತೆ ಕರಪತ್ರ ಹಾಗೂ ಡಂಗೂರ ಮೂಲಕ ಪ್ರಚಾರ ಮಾಡಲಾಗಿದೆ. ಆದರೂ ರೈತರೂಮತ್ತು ವ್ಯಾಪಾರಸ್ಥರು ಸಂತೆ ನಡೆಸಿದ್ದಾರೆ.ಕುರಿ-ಮೇಕೆ ಸಂತೆ ಎಪಿಎಂಸಿ ವ್ಯಾಪ್ತಿಗೆ ಒಳ ಪಡುತ್ತದೆ. ಅವರು ಜವಾಬ್ದಾರಿ ವಹಿಸಬೇಕಿತ್ತು.
–ಪ್ರತಿಭಾ, ಪಿಡಿಒ, ಅಕ್ಕಿರಾಂಪುರ
ಸಂತೆ ನಡೆಯುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಮಾಹಿತಿ ನೀಡಿಲ್ಲ. ಯಾವಸಂತೆ ಎಲ್ಲಿ ನಡೆಯುತ್ತದೆ. ಸಂತೆಯ ಸಮಸ್ಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.ಪಿಡಿಒ ಕಡೆಯಿಂದ ಮಾಹಿತಿ ಪಡೆಯಲಾಗುವುದು.
–ಶಿವಪ್ರಕಾಶ್, ತಾಪಂ ಇಒ, ಕೊರಟಗೆರೆ