Advertisement

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್‌

08:28 PM Dec 03, 2021 | Team Udayavani |

ಉತ್ತರಪ್ರದೇಶ: ನಾವೀಗ ಹೇಳುತ್ತಿರುವುದೊಂದು ಅಪರೂಪದ ಪ್ರಕರಣ..ಹಾಗೇನೂ ಅಂದುಕೊಳ್ಳಬೇಡಿ. ಪೂರ್ತಿ ಓದಿದ ಮೇಲೆ ಘಟನೆಯ ಪ್ರಾಮುಖ್ಯತೆಯನ್ನು ನೀವೇ ನಿರ್ಧರಿಸಿ.

Advertisement

ಉತ್ತರಪ್ರದೇಶದ ಕಾನ್ಪುರದ ಚೌಬೆಪುರದ ಅಭಿವೃದ್ಧಿ ಘಟಕದ ಕಚೇರಿಯೊಂದಕ್ಕೆ ಕಪ್ಪು ಮೇಕೆಯೊಂದು ದಿಢೀರನೆ ನುಗ್ಗಿದೆ.

ಆಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ಮೇಕೆ ಹೊರಬರುವಾಗ ಬಾಯಲ್ಲೊಂದು ಫೈಲನ್ನು ಕಚ್ಚಿಕೊಂಡಿದ್ದನ್ನು ಯಾರೋ ನೋಡಿದ್ದಾರೆ.

ಸಿಬ್ಬಂದಿಯೊಬ್ಬರು ಮೇಕೆಯನ್ನು ಅಟ್ಟಿಸಿಕೊಂಡು ಓಡಿ, ಕಡೆಗೂ ಫೈಲ್‌ ವಾಪಸ್‌ ತಂದಿದ್ದಾರೆ. ಅಷ್ಟರಲ್ಲಾಗಲೇ ಬೇಕಾದಷ್ಟು ಎಡವಟ್ಟೂ ಆಗಿದೆ. ಅದಕ್ಕೆ ಹೇಗೋ ಮಾಡಿ ಸಿಬ್ಬಂದಿ ತೇಪೆ ಹಾಕಿದ್ದಾರೆ.

ಇಷ್ಟೆಲ್ಲ ಆದ ಮೇಲೆ ಅಭಿವೃದ್ಧಿ ಅಧಿಕಾರಿ, ಅದೇನೂ ಮುಖ್ಯ ಫೈಲಲ್ಲ, ಯಾವುದೋ ಕಾಗದವಷ್ಟೇ ಎಂದು ತೇಪೆ ಸಾರಿಸಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next