Advertisement

41,364 ಮಕ್ಕಳಿಗೆ ಬಿಸಿಯೂಟ ಆಹಾರ ಧ್ಯಾನ ವಿತರಿಸುವ ಗುರಿ

03:02 PM Aug 01, 2020 | Suhan S |

ಆಳಂದ: ದೇಶದಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ ಮೇಲಿಂದ ಮೇಲೆ ಲಾಕ್‌ಡೌನ್‌ ಜಾರಿ ಆಗುತ್ತಿದೆ. ಈ ವೇಳೆ ಮಕ್ಕಳಿಗೆ ಪಠ್ಯ, ಪುಸ್ತಕ, ಸಮವಸ್ತ್ರದೊಂದಿಗೆ ಅಕ್ಕಿ, ಬೆಳೆ, ಎಣ್ಣೆ ನೀಡುತ್ತಿರುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಾಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಡಾ| ರಾಜಕುಮಾರ ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಧಂಗಾಪುರ ಪ್ರತಿಬಿಂಬ ಸೇವಾ ಸಂಸ್ಥೆ ಕಾರ್ಯಾಯದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಆಹಾರ ಧ್ಯಾನ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಒಟ್ಟು 279 ಶಾಲೆಗಳು ಅನುದಾನಿತ ಮತ್ತು ಸರಕಾರಿ ಪ್ರೌಢಶಾಲೆ 59 ಇದ್ದು, ಒಟ್ಟು 41,364 ಮಕ್ಕಳು ಇದ್ದಾರೆ. 3 ಎನ್‌ಜಿಒ ಮುಖಾಂತರ 1,575 ಮಕ್ಕಳು ಒಳಪಡುತ್ತವೆ. ಒಟ್ಟು 19 ಸಾವಿರ ಕ್ವಿಂಟಲ್‌ ಅಕ್ಕಿ ಗುರಿ ಇದ್ದು, ಅದರಲ್ಲಿ 18 ಸಾವಿರ ಕ್ವಿಂಟಲ್‌ ಲಭ್ಯವಿದೆ. 1090 ಕ್ವಿಂಟಲ್‌ ಬೆಳೆ ಬೇಕಾಗಿದ್ದು, ಅದರಲ್ಲಿ 380 ಕ್ವಿಂಟಲ್‌ ಬೆಳೆ ಇದೆ. ಈಗಾಗಲೇ 3,032 ಮಕ್ಕಳಿಗೆ ಆಹಾರ ಧ್ಯಾನ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರೌಢಶಾಲೆ ಮುಖ್ಯಗುರು ಸ್ನೇಹಲತಾ ಕುಲಕರ್ಣಿ ಮಾತನಾಡಿ, ನಮ್ಮ ಶಾಲೆಗೆ ಪ್ರತಿಬಿಂಬ ಸೇವಾ ಸಂಸ್ಥೆಗಳ ಮೂಲಕ ಸುಮಾರು ವರ್ಷಗಳಿಂದ ಬಿಸಿಯೂಟ ಪಡೆಯುತ್ತಿದ್ದೇವೆ. ಸಂಸ್ಥೆಯ ಸಹ ಭಾಗಿತ್ವದಲ್ಲಿ ಮಕ್ಕಳಿಗೆ ಆಹಾರ ಧ್ಯಾನ ವಿತರಣೆ ಆಗುತ್ತಿದೆ ಎಂದರು.

ಗ್ರಾಮ ಸುಧಾರಣಾ ಸಮಿತಿಯ ಚಂದ್ರಶೇಖರ ಶೇಗಜಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಕೇಶ ಚವ್ಹಾಣ, ಅಶೋಕ ಗಾಯಕವಾಡ, ಸುರೇಶ ಕುಲಕರ್ಣಿ, ಅಂಬಿಕಾ ಅಷ್ಠಗಿ, ಪುತಳಾಬಾಯಿ ತಳವಾರ ಹಾಗೂ ಹಣಮಂತ ಕುಲಕರ್ಣಿ, ಜಗದೀಶ ಕೋರೆ, ಶಾಂತಪ್ಪ ಕೋರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next