Advertisement

ಬೆಂಗಳೂರು : ಗೋ ಏರ್ ವಿಮಾನ 10 ಗಂಟೆ ವಿಳಂಬ; ಪ್ರಯಾಣಿಕರ ಆಕ್ರೋಶ

07:55 PM Oct 09, 2021 | Team Udayavani |

ಬೆಂಗಳೂರು : ಇಲ್ಲಿಂದ ಬಿಹಾರದ ಪಾಟ್ನಾಗೆ ಹಾರಾಟ ಮಾಡಬೇಕಾಗಿದ್ದ ಗೋ ಏರ್ ವಿಮಾನ 10 ಗಂಟೆ ವಿಳಂಬವಾಗಿ ಪ್ರಯಾಣಿಕರು ಪರದಾಡಿದ ಘಟನೆ ಶನಿವಾರ ನಡೆದಿದೆ.

Advertisement

ವಿಮಾನ ನಿಲ್ದಾಣದಲ್ಲಿ ವಿಮಾನದ ವಿಳಂಬದ ಕುರಿತು ಯಾವುದೇ ಸ್ಪಷ್ಟನೆ ಪ್ರಯಾಣಿಕರಿಗೆ ನೀಡಲಾಗಿಲ್ಲ ಎಂದು ಸಾಮಾಜಿಕ ತಾಣದಲ್ಲಿ ಹೇಳಿಕೊಳ್ಳಲಾಗಿದೆ.

ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೂ ಸರಿಯಾಗಿ ಉತ್ತರ ಕೊಡದೆ ಉದ್ದಟತನ ತೋರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕಾದು ಕಾದು ರೋಸಿ ಹೋದ ಪ್ರಯಾಣಿಕರು ಅನ್ಯ ಮಾರ್ಗವಿಲ್ಲದೆ ಪರಸ್ಪರ ಹರಟೆ ಹೊಡೆಯುತ್ತಾ ಸಮಯ ಕಳೆಯಬೇಕಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಳ್ಳಲಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next