ಹೊಸದಿಲ್ಲಿ : ಎರಡು ಇಂಜಿನ್‌ಗಳ ಗೋಏರ್ ಏರ್ ಬಸ್ ಎ320 ನಿಯೋ ವಿಮಾನದ ಹಾರಾಟದ ವೇಳೆ ಒಂದು ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡರೂ ಇನ್ನೊಂದು ಇಂಜಿನ್‌ನನ್ನು ಸಕಾಲಿಕವಾಗಿ ಬಳಸಿಕೊಂಡು ಲಕ್ನೋದಲ್ಲಿ ಸುರಕ್ಷಿತವಾಗಿ ಇಳಿದ ಘಟನೆ ನಿನ್ನೆ ಗುರುವಾರ ನಡೆದಿರುವುದು ತಡವಾಗಿ ವರದಿಯಾಗಿದೆ.
Pratt & Whitney (PW) ಇಂಜಿನ್ ಹೊಂದಿರುವ ಈ ಗೋ ಏರ್ ವಿಮಾನವು ನಿನ್ನೆ ಗುರುವಾರ ಪಟ್ನಾದಿಂದ ದಿಲ್ಲಿಗೆ ಹಾರುತ್ತಿತ್ತು.
ಆಗ ವಿಮಾನದ ಒಂದು ಇಂಜಿನ್ ಹಾಳಾಯಿತು. ಹಾಗಿದ್ದರೂ ಇನ್ನೊಂದು ಇಂಜಿನ್ ಮೂಲಕ ಹಾರಾಟ ನಡೆಸಿದ ವಿಮಾನ ಅತ್ಯಂತ ಸಮೀಪದ ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಹಾಗಾಗಿ ಪ್ರಯಾಣಿಕರೆಲ್ಲರ ಸಂಭವನೀಯ ದುರಂತದಿಂದ ಅದೃಷ್ಟವಶಾತ್ ಪಾರಾದರು.
ವಿಮಾನವು ಈಗ ಲಕ್ನೋ ನಿಲ್ದಾಣದಲ್ಲೇ ಉಳಿದುಕೊಂಡಿದೆ. ಗೋ ಏರ್, ಪಿಡಬ್ಲ್ಯು ಮತ್ತು ವೈಮಾನಿಕ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ಘಟನೆಯ ತನಿಖೆಗಾಗಿ ಮಾಹಿತಿ ಪಡೆಯಲು ಫ್ಲೈಟ್ ಡಾಟಾ ರೆಕಾರ್ಡರ್ ತೆಗೆಯಲಾಗಿದೆ.
ಹಾರಾಟದ ನಡುವೆಯೇ ತಾಂತ್ರಿಕ ದೋಷಕ್ಕೆ ಗುರಿಯಾದ ವಿಮಾನದ ಒಂದು ಇಂಜಿನ್ ವಿಲಕ್ಷಣಕಾರಿ ಹೀಟಿಂಗ್ ಮತ್ತು ತೈಲ ನಷ್ಟಕ್ಕೆ ಗುರಿಯಾಗಿರುವುದು ಕಂಡು ಬಂದಿದೆ.
320 ನಿಯೋ ವಿಮಾನಗಳ Pratt & Whitney (PW) ಇಂಜಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದ ಹಲವಾರು ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ವರದಿಯಾಗಿವೆ.