Advertisement

ಸಪ್ಟೆಂಬರ್ 1 ರಿಂದ ನೆರೆಯ ರಾಜ್ಯಗಳಿಗೆ ಕದಂಬ ಬಸ್ ಓಡಾಟ

04:13 PM Aug 24, 2021 | Team Udayavani |

ಪಣಜಿ : ರಾಜ್ಯದಲ್ಲಿ ಸಪ್ಟೆಂಬರ್ 1 ರಿಂದ ನೆರೆಯ ರಾಜ್ಯಗಳಿಗೆ ಕದಂಬ ಬಸ್ ಓಡಾಟ ಆರಂಭಿಸಲು ಗೋವಾ  ಕದಂಬ ಮಹಾಮಂಡಳಿ ನಿರ್ಣಯ ತೆಗೆದುಕೊಂಡಿದೆ.

Advertisement

ಈಗಾಗಲೇ ಪಣಜಿ-ಮಡಗಾಂವ- ಕಾರವಾರ ಮಾರ್ಗಕ್ಕೆ ಕದಂಬ ಸಾರಿಗೆಯ ಇಲೆಕ್ಟ್ರಿಕ್ ಬಸ್ ಓಡಾಟ ಆರಂಭಿಸಲಾಗಿದೆ. ಅಂತೆಯೇ ಸಪ್ಟೆಂಬರ್ 1 ರಿಂದ ಇತರ ರಾಜ್ಯಗಳಿಗೂ ಕದಂಬ ಬಸ್ ಓಡಾಟ ಆರಂಭಗೊಳ್ಳಲಿದೆ.

ಇದನ್ನೂ ಓದಿ : ಎಚ್.ಡಿ.ಕುಮಾರಸ್ವಾಮಿ ಇಲ್ಲದಿದ್ದರೆ ಸಾರಾ ಮಹೇಶ್ ಜೀರೋ: ಜಿ.ಟಿ ದೇವೇಗೌಡ ಟೀಕೆ

ಪಣಜಿ-ಮುಂಬಯಿ-ಬೋರಿವೆಲ್, ಮಡಗಾಮವ-ಪುಣೆ, ವಾಸ್ಕೊ-ಪಣಜಿ-ಸೊಲ್ಲಾಪುರ, ಪಣಜಿ-ಬೆಂಗಳೂರು, ಮಡಗಾಂವ-ಪುಣೆ, ಮಡಗಾಂವ-ಮುಂಬಯಿ-ಧೋಬಿತಲಾವ್, ಪಣಜಿ-ಶಿರ್ಡಿ, ಪಣಜಿ-ಮೈಸೂರು,  ಸೇರಿದಂತೆ ಹಲವು ಪ್ರಮುಖ ಮಾರ್ಗಗಳಿಗೆ ಗೋವಾದ ಕದಂಬ ಸಾರಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ಗೋವಾ ಕದಂಬ ಮಹಾಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ : ನನ್ನ ಮನವಿಯನ್ನು ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ: ಆನಂದ್ ಸಿಂಗ್

Advertisement
Advertisement

Udayavani is now on Telegram. Click here to join our channel and stay updated with the latest news.

Next