Advertisement

ಜು.2ರಿಂದ ಗೋವಾ ಪ್ರವಾಸೋದ್ಯಮ ಪುನಾರಂಭ

11:08 PM Jul 01, 2020 | Sriram |

ಪಣಜಿ: ಗೋವಾ ಪ್ರವಾಸೋದ್ಯಮವನ್ನು ಪ್ರವಾಸಿಗರಿಗಾಗಿ ತೆರೆಯಲು ಗೋವಾ ಸರ್ಕಾರ ನಿರ್ಧರಿಸಿದೆ.

Advertisement

ಜು.2ರಿಂದ ದೇಶದ ಪ್ರವಾಸಿಗರಿಗೆ ಗೋವಾಗೆ ಬರಲು ಅನುವು ಮಾಡಿದೆ. ಇದಕ್ಕಾಗಿ 250 ಹೋಟೆಲ್‌ಗ‌ಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್‌ ಅಜ್ಗಾವೊಂಕರ್‌ ತಿಳಿಸಿದ್ದಾರೆ.

ಹೊರ ರಾಜ್ಯಗಳಿಂದ ಬರುವವರು ಅವರಿಗೆ ಕೋವಿಡ್-19 ಸೋಂಕು ಇಲ್ಲ ಎಂಬುದಕ್ಕೆ ಪ್ರಮಾಣ ಪತ್ರ ತರಬೇಕು ಅಥವಾ ಗೋವಾದ ಗಡಿಯಲ್ಲಿ ತಪಾಸಣೆಗೆ ಒಳಗಾಗಿ ವರದಿ ಬರುವವರೆಗೆ ಕ್ವಾರಂಟೈನ್‌ ವ್ಯವಸ್ಥೆಯಲ್ಲಿ ಇರಬೇಕು.

ಒಂದು ವೇಳೆ ಅವರಿಗೆ ಕೋವಿಡ್-19 ಸೋಂಕು ದೃಢವಾದರೆ ಮತ್ತು ಅವರು ಬಯಸಿದರೆ ಗೋವಾದಲ್ಲೇ ಚಿಕಿತ್ಸೆಯನ್ನೂ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next