ಪಣಜಿ : ನೆರೆಯ ರಾಜ್ಯಗಳಿಂದ ಗೋವಾಕ್ಕೆ ಪ್ರವೇಶಿಸಬೇಕಾದರೆ ಐಸಿಎಂಆರ್ ಸಮ್ಮತಿಸಿದ ಯಾವುದೇ ರೀತಿಯ ಕೋವಿಡ್ ತಪಾಸಣೆ ಮಾಡಿಸಿಕೊಂಡು ಗೋವಾ ರಾಜ್ಯಕ್ಕೆ ಪ್ರವೇಶಿಸಬಹುದಾಗಿದೆ. ಈ ಕುರಿತು ಗೋವಾ ಸರ್ಕಾರ ನಿಯಮ ಸಡಿಲಿಕೆ ಮಾಡಿದ್ದು, ಇಂದು(ಶುಕ್ರವಾರ, ಜೂನ್ 11) ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಅನಿವಾರ್ಯವಾದರೆ ಶೀಘ್ರವೇ ಮತ್ತೊಂದು ಪ್ಯಾಕೇಜ್ ಘೋಷಣೆ :ಸಿಎಂ
ಲಾಕ್ ಡೌನ್ ಜಾರಿಯಾದಾಗಿನಿಂದ ನೆರೆಯ ತಾಜ್ಯಗಳಿಂದ ಗೋವಾ ರಾಜ್ಯ ಪ್ರವೇಶಿಸಲು 72 ಗಂಟೆಗಳ ಆರ್ ಟಿಪಿಸಿಆರ್ ಪ್ರಮಾಣಪತ್ರ ಖಡ್ಡಾಯಗೊಳಿಸಲಾಗಿತ್ತು. ಆದರೆ ಇದೀಗ ಈ ಆದೇಶದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು, ಆರ್ ಟಿಪಿಸಿಆರ್, ಟ್ರೂನಾಟ್, ರ್ಯಾಪಿಡ್ ಆ್ಯಂಟಿಜನ್ ಟೆಸ್ಟ ಅಥವಾ ಐಸಿಎಂಆರ್ ಸಮ್ಮತಿಸಿದ ಯಾವುದೇ ಕೋವಿಡ್ ತಪಾಸಣೆ ಮಾಡಿಸಿಕೊಂಡು ಗೋವಾಕ್ಕೆ ಪ್ರವೇಶಿಸಬಹುದಾಗಿದೆ.
ಇಷ್ಟು ದಿನ ಗೋವಾಕ್ಕೆ ಆಗಮಿಸಲು ಆರ್ ಟಿಪಿಸಿಆರ್ ಖಡ್ಡಾಯಗೊಳಿಸಿದ್ದರಿಂದ ನೆರೆಯ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ತಪಾಸಣಾ ವರದಿ ಬರುವುದು ಹೆಚ್ಚಿನ ವಿಳಂಭವಾಗುತ್ತಿತ್ತು. ಇದೀಗ ಗೋವಾ ಪ್ರವೇಶ ಇನ್ನಷ್ಟು ಸುಲಭವಾದಂತಾಗಿದೆ.
ಇದನ್ನೂ ಓದಿ : ಗೋವಾ : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ