ಪಣಜಿ : ಗೋವಾದ ಗಡಿಗಳಲ್ಲಿ ಕೋವಿಡ್ ಖಡ್ಡಾಯ ತಪಾಸಣೆಗಾಗಿ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ. ಹೊರ ರಾಜ್ಯದಿಂದ ಗೋವಾಕ್ಕೆ ಬರುವ ಕೋವಿಡ್ ತಪಾಸಣಾ ನೆಗೆಟಿವ್ ಪ್ರಮಾಣಪತ್ರ ಹೊಂದಿರದ ವ್ಯಕ್ತಿಗಳಿಗೆ ಗಡಿಯಲ್ಲಿ ಕಫೋವಿಡ್ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿಯೂ ಇದೇ ರೀತಿ ಖಾಸಗಿ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಅವರು, ಗಡಿಯಲ್ಲಿ ಕೋವಿಡ್ ತಪಾಸಣೆ ಮಾಡಿಕೊಂಡವರಿಗೆ ಕೋಡಲೇ ತಪಾಸಣಾ ವರದಿಯನ್ನೂ ನೀಡಲಾಗುವುದು. ರೈಲ್ವೆ ನಿಲ್ದಾಣಗಳಲ್ಲಿಯೂ ಇದೇ ರೀತಿ ಖಾಸಗಿ ಲ್ಯಾಬ್‍ಗಳನ್ನು ಸ್ಥಾಪಿಸಿ ಗೋವಾಕ್ಕೆ ಬಂದಿಳಿದ ರೈಲ್ವೆ ಪ್ರಯಾಣಿಕರಿಗೆ ಸ್ಥಳದಲ್ಲೇ ಕೋವಿಡ್ ತಪಾಸಣೆ ನಡೆಸಲಾಗುವುದು ಎಂದು ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿ ಬಂಡಾಯ ಶಾಸಕ ಯತ್ನಾಳ ಜೊತೆ ರಹಸ್ಯ ಮಾತುಕತೆ ನಡೆಸಿದ ಸಚಿವ ಯೋಗೇಶ್ವರ್
ರಾಜ್ಯದಲ್ಲಿ ಕಫ್ರ್ಯೂ ಜಾರಿಯಾದ ಸಂದರ್ಭದಲ್ಲಿ ಗೋವಾದಿಂದ ತಮ್ಮ ತಮ್ಮ ಊರಿಗೆ ವಾಪಾಸ್ಸಾಗಿದ್ದ ವಿವಿಧ ರಾಜ್ಯಗಳ ಮೂಲದ ಕೂಲಿ ಕಾರ್ಮಿಕರು ಇದೀಗ ಗೋವಾಕ್ಕೆ ವಾಪಾಸ್ಸಾಗುತ್ತಿದ್ದಾರೆ. ರೈಲಿನ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಗೋವಾಕ್ಕೆ ಕಾರ್ಮಿಕರು ಆಗಮಿಸುತ್ತಿರುವುದರಿಂದ ಗೋವಾದ ಮಡಗಾಂವ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಜನ ಸಂದಣಿ ಉಂಟಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಓರಿಸ್ಸಾ, ಸೇರಿದಂತೆ ವಿವಿಧ ರಾಜ್ಯಗಳಿಂದ ರೈಲಿನ ಮೂಲಕ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಉದ್ಯೋಗಗಳಿಗೆ ಚಾಲನೆ ದೊರೆತಂತಾಗಿದೆ. ಇದೀಗ ಗೋವಾದಲ್ಲಿ ಹಂತ ಹಂತವಾಗಿ ವಿವಿಧ ಉದ್ಯೋಗಳು ಪುನರಾರಂಭಗೊಳ್ಳುತ್ತಿದೆ.
ಇದನ್ನೂ ಓದಿ : ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?