Advertisement

ಗೋವಾ ಅಭಿವೃದ್ಧಿಯಲ್ಲಿ ಹೊರ ರಾಜ್ಯದ ಜನರ ಕೊಡುಗೆ ಮಹತ್ವದ್ದಾಗಿದೆ: ಪ್ರಮೋದ ಸಾವಂತ್

03:48 PM Sep 06, 2021 | Team Udayavani |

ಪಣಜಿ: ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಹೊರ ರಾಜ್ಯದ ಜನರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯ ಸರ್ಕಾರವು ಉತ್ತರ ಭಾರತದ ಜನರ ಬೆನ್ನಿಗೆ ನಿಂತಿದೆ. ಮುಂಬರುವ ದಿನಗಳಲ್ಲಿಯೂ ಅವರಿಗೆ ಮಾನ್ಯತೆ, ಸಮ್ಮಾನಗಳು ಇರಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುಡಿದರು.

Advertisement

ಪಣಜಿಯ ಗೋಮಂತಕ ಮರಾಠಾ ಸಮಾಜದ ಸಭಾಗೃಹದಲ್ಲಿ ಆಯೋಜಿಸಿದ್ದ ಉತ್ತರ ಭಾರತೀಯ ಸಮ್ಮೇಳನವನ್ನುದ್ದೇಶಿಸಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿ- ನವಭಾರತ ನಿರ್ಮಾಣ ಇದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಗಿದೆ, ಇದನ್ನು ಸಾಕಾರಗೊಳಿಸಲು ಎಲ್ಲಾ ವರ್ಗದ ಜನರೂ ಒಗ್ಗಟ್ಟಾಗಬೇಕು. ಗೋವಾ ರಾಜ್ಯದಲ್ಲಿರುವ ಹೊರ ರಾಜ್ಯಗಳ ಜನರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಸ್ಥಳೀಯರೊಂದಿಗೆ ಎಲ್ಲರಿಗೂ ಲಭಿಸಬೇಕು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನುಡಿದರು.

ಇದನ್ನೂ ಓದಿ:ರವಿ ಕಟಪಾಡಿ ವಿದೇಶದ ಉದ್ಯೋಗ ಬಿಟ್ಟು ಬಂದ ಕಾರಣ ಗೊತ್ತಾ ?

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next