Advertisement

ಗೋವಾ ಸಚಿವ ಅಜಗಾಂವ್ಕರ್‌ ಕ್ಷಮೆ ಯಾಚಿಸಲು ಒತ್ತಾಯ

02:54 PM Apr 12, 2017 | Team Udayavani |

ದಾವಣಗೆರೆ: ಗೋವಾದಲ್ಲಿ ಅನೇಕ ವರ್ಷದಿಂದ ವಾಸಿಸುತ್ತಿರುವ ರಾಜ್ಯದ ಲಂಬಾಣಿ ಸಮಾಜ ಬಾಂಧವರ ಬಗ್ಗೆ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಸಚಿವ ಮನೋಹರ್‌ ಅಜಗಾಂವ್ಕರ್‌ ನೀಡಿರುವ ಹೇಳಿಕೆ ಖಂಡಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ(ಎಚ್‌. ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

Advertisement

ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಚಿವ ಮನೋಹರ್‌ ಅಜಗಾಂವ್ಕರ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಭಾಗದ ಲಂಬಾಣಿ ಸಮುದಾಯವದರು ಜೀವನ ನಿರ್ವಹಣೆಗೆ ಗೋವಾದಲ್ಲಿ ಅನೇಕ ವರ್ಷದಿಂದ ವಾಸಿಸುತ್ತಿದ್ದಾರೆ.

ತಮ್ಮ ಜೀವನ ನಿರ್ವಹಣೆಯ ಜೊತೆಗೆ ಆ ರಾಜ್ಯಕ್ಕೂ ವಿವಿಧ ರೂಪದಲ್ಲಿ ಕೊಡುಗೆ ನೀಡಿದ್ದಾರೆ. ಅಂತಹ ಸಮುದಾಯದವರ ಬಗ್ಗೆ ಸಚಿವ ಮನೋಹರ್‌ ಅಜಗಾಂವ್ಕರ್‌ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಎಲ್ಲರನ್ನೂ ಗೋವಾದಿಂದ ಹೊರ ಹಾಕುವಂತೆ ಹೇಳಿರುವುದು ಅವರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಇರುವ ಅರಿವಿನ ಕೊರತೆ ಪ್ರತೀಕ ಎಂದು ದೂರಿದರು. 

ಈ ಕೂಡಲೇ ಬಹಿರಂಗವಾಗಿ ಸಮಸ್ತ ಕನ್ನಡಿಗರ ಕ್ಷಮೆ ಕೋರುವ ಜೊತೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ನುದ್ರತ್‌ ಅನ್ವರ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶುಭಮಂಗಳ, ತಾರೀಖ್‌ ನಕಾಶ್‌, ಜಾಲಿಕಟ್ಟೆ ಇಮ್ರಾನ್‌, ಜಬೀಖಾನ್‌, ರವಿನಾಯಕ್‌, ಶಬೀºರ್‌ ಅಹಮ್ಮದ್‌, ಅನ್ವರ್‌ ಹುಸೇನ್‌, ಅತೀಫುಲ್ಲಾ, ನಾಗರಾಜ್‌, ಲಕ್ಷ್ಮಿದೇವಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next