Advertisement

Goa: ಜ. 5 ರಿಂದ 25 ರವರೆಗೆ ಅನ್ಮೋಡ್ ಘಾಟ್ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧ

06:01 PM Jan 03, 2024 | Pranav MS |

ಪಣಜಿ: ಜನವರಿ 5 ರಿಂದ 25 ರವರೆಗೆ ಭಾರೀ ವಾಹನಗಳಿಗೆ ಅನ್ಮೋಡ್ ಘಾಟ್ ರಸ್ತೆಯನ್ನು ಮುಚ್ಚಲಾಗಿದೆ. ರೈಲ್ವೆ ಇಲಾಖೆಯ ಡಬ್ಲಿಂಗ್ ಕಾಮಗಾರಿಗಾಗಿ ರಸ್ತೆ ಬಂದ್ ಮಾಡುವುದಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ಈ ಮಾರ್ಗವಾಗಿ ಓಡಾಡುವ ವಾಹನಗಳಿಗೆ ರಾಮನಗರ, ತಿನೇಘಾಟ್, ಸಣ್ಣ ವಾಹನಗಳಿಗೆ ಮಸರ್ಂಗಲ್ ಮತ್ತು ಅನ್ಮೋಡ್, ಕಾಸರ್ಲಾಕ್, ಚಂಡೆವಾಡಿ ಜಗಲಬೆಟ್ ಮಾರ್ಗವನ್ನು ನೀಡಲಾಗಿದೆ. ಭಾರಿ ವಾಹನಗಳಿಗೆ ಅಳ್ನಾವರ-ತಾಳಾಪುರ-ಯಲ್ಲಾಪುರ ಮಾರ್ಗವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಟ್ರಾಫಿಕ್ ಜಾಮ್ ಸಮಸ್ಯೆ:– ಅನ್ಮೋಡ್‌ ಘಾಟ್ ಬೆಳಗಾವಿ ಮತ್ತು ಗೋವಾವನ್ನು ಸಂಪರ್ಕಿಸುವ ಪ್ರಮುಖ ಘಾಟ್ ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದು ವಾರದ ಹಿಂದೆ ಟ್ರಾಲಿಯೊಂದು ಘಾಟ್‍ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟು ಮಾಡಿತ್ತು. ಅಲ್ಲದೆ ಕೆಲ ತಿಂಗಳ ಹಿಂದೆ ಅನ್ಮೋಡ್‌ನಿಂದ ರಾಮನಗರದವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ವಾಹನ ಚಾಲಕರು ಈ ಮಾರ್ಗವಾಗಿ ಓಡಾಟ ನಡೆಸಲು ಕಸರತ್ತು ನಡೆಸಬೇಕಾಯಿತು.

ಪ್ರವೇಶ ಶುಲ್ಕ:-ಗೋವಾದಿಂದ ಕರ್ನಾಟಕಕ್ಕೆ ಬರುವ ವಾಹನಗಳು ಅನ್ಮೋಡ್ ಚೆಕ್ ಪೋಸ್ಟ್‍ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು ಮತ್ತು ಕರ್ನಾಟಕ ಅರಣ್ಯ ಇಲಾಖೆಯು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ರಾಷ್ಟ್ರೀಯ ವನ್ಯಜೀವಿ ಉದ್ಯಾನವನಗಳ ಮೂಲಕ ಹಾದುಹೋಗುವ ವಾಹನಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next