Advertisement

Goa ಕಾಡ್ಗಿಚ್ಚಿನಿಂದ ಹಲವು ಕಡೆ ಅಪಾರ ಅರಣ್ಯ ನಾಶ; ರಾಜ್ಯಸಭೆಯಲ್ಲಿ ಮಾಹಿತಿ

03:42 PM Apr 07, 2023 | Team Udayavani |

ಪಣಜಿ: ಕಳೆದ ಎರಡು ತಿಂಗಳಲ್ಲಿ ಗೋವಾ ರಾಜ್ಯ ಅರಣ್ಯ ಪ್ರದೇಶದಲ್ಲಿ  ಹಲವು ಬಾರಿ ಕಾಡ್ಗಿಚ್ಚಿನ ಘಟನೆಗಳು ನಡೆದಿವೆ. ಬೆಂಕಿಯಿಂದಾಗಿ ಒಟ್ಟು 4.18 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ನಾಶವಾಗಿದೆ ಎಂಬ ಮಾಹಿತಿ ಇದೀಗ ಪರಿಸರ ಪ್ರೇಮಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಗುರುವಾರ ರಾಜ್ಯಸಭೆಯಲ್ಲಿ ಸಂಸದ ಲೂಯಿಝಿನ್ ಫಾಲೆರೊ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

Advertisement

ಕಳೆದ ತಿಂಗಳು ರಾಜ್ಯಾದ್ಯಂತ ಅಭಯಾರಣ್ಯ ಪ್ರದೇಶದಲ್ಲಿ 74 ಕಾಡ್ಗಿಚ್ಚು ಸಂಭವಿಸಿವೆ. ಕಳೆದ ತಿಂಗಳು, ರಾಜ್ಯದಾದ್ಯಂತ ಖಾಸಗಿ ಭೂಮಿ, ಮೀಸಲು ಅರಣ್ಯಗಳು, ಸಮುದಾಯ ಭೂಮಿ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಕಾಡ್ಗಿಚ್ಚು ಘಟನೆ ನಡೆದಿದೆ. ಈ ಕಾಡ್ಗಿಚ್ಚು ಮೂರು ವನ್ಯಜೀವಿ ಅಭಯಾರಣ್ಯಗಳ ನಡುವಿನ 2.27 ಚದರ ಕಿಲೋಮೀಟರ್ ಪ್ರದೇಶವು ಬೆಂಕಿಗಾಹುತಿಯಾಗಿದೆ. ಇದು ಸೇರಿ ಒಟ್ಟು 4.18 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.

ಮಾರ್ಚ್ ಮೊದಲ ಹದಿನೈದು ದಿನಗಳಲ್ಲಿ ದಾಖಲಾದ ಒಟ್ಟೂ  74 ಕಾಡ್ಗಿಚ್ಚು ಪ್ರಕರಣದಲ್ಲಿ 32 ಪ್ರಕರಣಗಳು 3  ವನ್ಯಜೀವಿ ಅಭಯಾರಣ್ಯಗಳಲ್ಲಿ ನಡೆದಿದೆ ಎಂದು ಸಚಿವ ಚೌಬೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ದೂರದ ಮತ್ತು ದೂರದ ಪರ್ವತ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಭಾರತೀಯ ವಾಯುಪಡೆಯ (ಐಎಎಫ್) ನೆರವಿನೊಂದಿಗೆ ಗ್ರೌಂಡ್ ಟೀಂ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಶ್ವಿಯಾಗಿದೆ. ಅಭಯಾರಣ್ಯದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ನಿಂದ ವಾಟರ್ ಸ್ಪ್ರೇ ಕೂಡ ಬಳಸಲಾಗಿದೆ. ಎನ್‍ಡಿಆರ್ ಎಫ್‍ನ ಎರಡು ಬೆಟಾಲಿಯನ್‍ಗಳಿಗೆ ಕಾಡ್ಗಿಚ್ಚುಗಳ ವಿರುದ್ಧ ಹೋರಾಡಲು ತರಬೇತಿ ನೀಡಲಾಗಿದೆ ಎಂದು ಸಚಿವ ಚೌಬೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next