Advertisement

ಗೋವಾದಲ್ಲಿ ಆಗಸ್ಟ್ 2ರ ವರೆಗೆ ಕರ್ಫ್ಯೂ ವಿಸ್ತರಣೆ

07:31 PM Jul 25, 2021 | Team Udayavani |

ಪಣಜಿ: ರಾಜ್ಯಾದ್ಯಂತ ಮತ್ತೊಂದು ವಾರದ ವರೆಗೆ ಕಫ್ರ್ಯೂ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿಯೂ ಮಾಹಿತಿ ನೀಡಿದ್ದಾರೆ.

Advertisement

ಈಗಾಗಲೇ ಜಾರಿಯಲ್ಲಿರುವ ಕರ್ಫ್ಯೂ (ಡೇ&ನೈಟ್) ನಾಳೆ (ಜುಲೈ 26) ಬೆಳಿಗ್ಗೆ 7 ಗಂಟೆಗೆ ಮುಕ್ತಾಯಗೊಳ್ಳಲ್ಲಿದೆ. ಈ ಹಿನ್ನೆಲೆಯಲ್ಲಿ ಅಗಸ್ಟ್ 2ರ ವರೆಗೆ ಇದನ್ನೂ ವಿಸ್ತರಣೆ ಮಾಡಲಾಗಿದೆ.

ಈ ಹಿಂದೆ ಶಾಪ್ ಹಾಗೂ ಮಾಲ್ ಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿತ್ತು. ಇದೀಗ ಹೇರ್ ಕಟಿಂಗ್ ಸಲೂನ್ ಹಾಗೂ ಹೊರಾಂಗಣ ಕ್ರೀಡಾಂಗಣಗಳನ್ನೂ ತೆರೆಯಲಿವೆ. ಇನ್ನುಳಿದಂತೆ ಇದುವರೆಗೂ ಜಾರಿಯಲ್ಲಿರುವ ನಿಯಮಾವಳಿಗಳು ಮುಂದುವರೆಯಲಿದೆ, ಯಾವುದೆ ರಿಯಾಯಿತಿ ಇಲ್ಲ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next