Advertisement

ಗೋವಾ : ನೈಟ್ ಕರ್ಫ್ಯೂ,ಶಾಲೆಗಳು 15 ದಿನ ಬಂದ್ ಸಾಧ್ಯತೆ

06:20 PM Jan 01, 2022 | Team Udayavani |

ಪಣಜಿ: ರಾಜ್ಯದಲ್ಲಿ ಹರಡುತ್ತಿರುವ ಕೊರೊನ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ಕೂಡಲೆ ನೈಟ್ ಕರ್ಫ್ಯೂ ಜಾರಿಗೊಳಿಸುವುದು ಮತ್ತು 12 ನೇಯ ವರೆಗಿನ ವಿದ್ಯಾರ್ಥಿಗಳ ಶಾಲಾ ತರಗತಿಗಳನ್ನು 15 ದಿನ ಬಂದ್ ಬಂದ್ ಮಾಡಬೇಕು ಎಂದು ರಾಜ್ಯ ತಜ್ಞರ ಸಮಿತಿ ನಿರ್ಣಯ ತೆಗೆದುಕೊಂಡಿದೆ.

Advertisement

ಸಮೀತಿಯು ಈ ಪ್ರಸ್ತಾವವನ್ನು ರಾಜ್ಯ ಕೃತಿ ದಳಕ್ಕೆ ಸಲ್ಲಿಸಿದ್ದು ಶನಿವಾರ ನಡೆಯಲಿರುವ ಕೃತಿ ದಳದ ಸಭೆಯಲ್ಲಿ ಚರ್ಚಿಸಿ ರಾಜ್ಯದಲ್ಲಿ ನೈಟ್‍ಕರ್ಫ್ಯೂ ಜಾರಿಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಸದ್ಯದ ಕರೋನಾ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಈ ಕುರಿತ ನಿರ್ಣಯವನ್ನು ಕೃತಿದಳಕ್ಕೆ ನೀಡಲಾಗಿದೆ ಎಂದು ರಾಜ್ಯ ತಜ್ಞ ಸಮಿತಿಯ ಸದಸ್ಯ ಡಾ. ಧನೇಶ್ ವಳವೈಕರ್ ಮಾಹಿತಿ ನೀಡಿದ್ದಾರೆ.

ರಾಜ್ಯ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ, ಗೋವಾದಲ್ಲಿ ಕೋವಿಡ್ ನಿರ್ಬಂಧ ಹೇರುವ ಕುರಿತ ಮುನ್ಸೂಚನೆ ನೀಡಿದ್ದಾರೆ. ತಜ್ಞ ವೈದ್ಯರ ಸಮಿತಿ ನೀಡಿರುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಶನಿವಾರ ಕೃತಿದಳ ಬೈಠಕ್‍ನಲ್ಲಿ ಚರ್ಚೆ ನಡೆಯಲಿದೆ. ನಂತರ ರಾಜ್ಯದಲ್ಲಿ ನಿರ್ಬಂಧ ಹೇರುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ ಎಂಬ ಮಾಹಿತಿ ನೀಡಿದರು.

ಗೋವಾದಲ್ಲಿ ಕೊರೊನ ಸೋಂಕು ಭಾರಿ ಪ್ರಮಾಣದಲ್ಲಿ ಹರಡುತ್ತಿದ್ದು ಪಾಸಿಟಿವಿಟಿ ದರ ಶೇ 7 ಕ್ಕೆ ತಲುಪಿದೆ. ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಯಂತ್ರಣಕ್ಕೆ ಕಠಿಣ ನಿರ್ಬಂಧ ಹೇರುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next