Advertisement

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

06:15 PM May 20, 2024 | Team Udayavani |

ಪಣಜಿ: ಶಾಲಾ ರಜಾ ದಿನದ ಹಿನ್ನೆಲೆಯಲ್ಲಿ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಗೋವಾಕ್ಕೆ ಆಗಮಿಸುತ್ತಿದ್ದು ಗೋವಾದ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರ ಗರ್ದಿಯಿಂದ ಕೂಡಿರುವ ದೃಶ್ಯ ಕಂಡುಬರುತ್ತಿದೆ. ಸದ್ಯ ಗೋವಾದಲ್ಲಿ ದೇಶೀಯ ಪ್ರವಾಸಿಗರದ್ದೇ ಹವಾ ಎಂಬಂತಾಗಿದೆ.

Advertisement

ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ಆದರೆ ದೇಶೀಯ ಪ್ರವಾಸಿಗರು ಮಾತ್ರ ಈ ಕೊರತೆಯನ್ನು ನೀಗಿಸಿದಂತೆ ಕಂಡುಬರುತ್ತಿದೆ. ಗೋವಾದ ಬಹುತೇಕ ಎಲ್ಲ ಪ್ರವಾಸಿ ತಾಣಗಳಲ್ಲಿ ದೇಶೀಯ ಪ್ರವಾಸಿಗರು ಹೆಚ್ಚಾಗಿ ತುಂಬಿರುವ ದೃಶ್ಯ ಕಂಡು ಬರುತ್ತಿದೆ.

ಗೋವಾದ ಕಲಂಗುಟ್, ಮೀರಾಮಾರ್, ದೋನಾಪಾವುಲ್, ಶಿಕೇರಿ, ಮೋರಜಿ ಸೇರಿದಂತೆ ಪ್ರಮುಖ ಬೀಚ್‍ಗಳು ಪ್ರವಾಸಿಗರ ಗರ್ದಿಯಿಂದ ಕೂಡಿದೆ. ಸದ್ಯ ಶಾಲಾ ರಜಾ ದಿನದ ಹಿನ್ನೆಲೆಯಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ.

ಟ್ರಾಫಿಕ್ ಜಾಮ್…!
ಸದ್ಯ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಎಲ್ಲ ರಸ್ತೆಗಳು ಕೂಡ ಟ್ರಾಫಿಕ್ ಜಾಮ್‍ನಿಂದ ಕೂಡಿರುವ ದೃಶ್ಯ ಕಂಡುಬರುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next