ಪಣಜಿ: “ರಾಜ್ಯಸಭೆಯ ‘ನಾರಿ ಶಕ್ತಿ’ ಮಸೂದೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದ್ದಾರೆ.
ರಾಜ್ಯಸಭೆಯು ಗುರುವಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದು, ಪರವಾಗಿ 215 ಸದಸ್ಯರು ಮತ ಚಲಾಯಿಸಿದರು.
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ 128ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಇದಾಗಿದೆ. ವಿಧೇಯಕವನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗುವುದು. ರಾಷ್ಟ್ರಪತಿಗಳು ಅದನ್ನು ಅಂಗೀಕರಿಸಿದ ನಂತರ, ಮಸೂದೆಯನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ ಕಾಯ್ದೆ ಎಂದು ಕರೆಯಲಾಗುವುದು. ಈ ಮಸೂದೆಯನ್ನು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಸ್ವಾಗತಿಸಿದ್ದಾರೆ.
ವಿಧೇಯಕವನ್ನು ಸ್ವಾಗತಿಸಿದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, “ರಾಜ್ಯಸಭೆಯ ‘ನಾರಿ ಶಕ್ತಿ’ ಮಸೂದೆಯನ್ನು ನಾನು ಸ್ವಾಗತಿಸುತ್ತೇನೆ, ಈ ಮಸೂದೆಯ ಮೂಲಕ ಮಹಿಳೆಯರಿಗೆ ಗೌರವ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ, ಇದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ”ಗೋವಾದಲ್ಲಿ 13 ಸ್ಥಾನಗಳು ಮೀಸಲಾಗಿರುವುದರಿಂದ ಮಹಿಳೆಯರಿಗೆ ಇದೊಂದು ಸಂತಸದ ಸುದ್ದಿ. ಪರಿಣಾಮವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಗಳು ಪ್ರತಿನಿಧಿಸಲಿದ್ದಾರೆ. ಗೋವಾ ಬಿಜೆಪಿ, ಸರಕಾರ ಮತ್ತು ಗೋವಾ ನಾಗರಿಕರ ಪರವಾಗಿ ನಾನು ಈ ಮಸೂದೆಯನ್ನು ಸ್ವಾಗತಿಸುತ್ತೇನೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Vizag Zoo: ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಮೃತ್ಯು… ಹೃದಯಾಘಾತವೇ ಕಾರಣ